ಪಠಾಣ್ ಕೋಟ್ ಸೇನಾ ವಾಯುನೆಲೆ ಮೇಲೆ ಉಗ್ರರ ದಾಳಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಒಳಚರಂಡಿ ಪೈಪ್ ಮೂಲಕ ವಾಯುನೆಲೆ ಪ್ರವೇಶಿಸಿದ ಉಗ್ರರು..!

ಪಠಾಣ್ ಕೋಟ್ ನಲ್ಲಿ ಸೇನಾ ವಾಯುನೆಲೆಗೆ ಉಗ್ರರು ಒಳಚರಂಡಿ ಪೈಪ್ ಗಳ ಮೂಲಕ ಒಳಹೊಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ...

ಪಠಾಣ್ ಕೋಟ್: ಪಠಾಣ್ ಕೋಟ್ ನಲ್ಲಿ ಸೇನಾ ವಾಯುನೆಲೆಗೆ ಉಗ್ರರು ಒಳಚರಂಡಿ ಪೈಪ್ ಗಳ ಮೂಲಕ ಒಳಹೊಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಗ್ರರ ದಾಳಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸೇನಾಧಿಕಾರಿಗಳು ಇಷ್ಟು ಪ್ರಮಾಣದ ಉಗ್ರರು ಹೇಗೆ ವಾಯುನೆಲೆ ಪ್ರವೇಶಿಸಿದರು ಎಂಬ ಕುರಿತು ಗಂಭೀರವಾಗಿ ತನಿಖೆ  ನಡೆಸುತ್ತಿದ್ದು, ಒಳಚರಂಡಿ ಪೈಪ್ ಮೂಲಕವಾಗಿ ಒಳ ಹೊಕ್ಕಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ ವಾಯುನೆಲೆಗೆ ಅಳವಡಿಸಿರುವ ಒಳಚರಂಡಿ ಪೈಪ್ ಗಳು ನಲ್ವಾ ನಾಲೆಗೆ ಸಂಪರ್ಕ ಹೊಂದಿದೆ. ಹೀಗಾಗಿ ಅಲ್ಲಿಂದಲೇ ಉಗ್ರರು ಒಳಚರಂಡಿ ಪೈಪ್ ಮೂಲಕ ವಾಯುನೆಲೆ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಕೆಲ ಉಗ್ರರು ಸ್ಥಳೀಯ ಪೊಲೀಸ್ ಅಧಿಕಾರಿಯ ಜೀಪ್ ಅನ್ನು ಅಪಹರಿಸಿ ಪೊಲೀಸ್ ಸಮವಸ್ತ್ರ ಧರಿಸಿ ವಾಯುನೆಲೆ ಪ್ರವೇಶಿಸಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲಿರುವ ತಮ್ಮ  ನಾಯಕರನ್ನು ಸಂಪರ್ಕಿಸಲು ಪೊಲೀಸ್ ಅಧಿಕಾರಿಯ ಮೊಬೈಲ್ ಅನ್ನು ಬಳಕೆ ಮಾಡಿಕೊಂಡಿದ್ದಾರೆ. ಉಗ್ರರು ಮಾಡಿದ್ದ ಕರೆಗಳನ್ನು ಈಗಾಗಲೇ ಗುಪ್ತಚರ ಇಲಾಖೆಯ ಅಧಿಕಾರಿಗಳು  ಪರಿಶೀಲಿಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಮೊದಲೇ ಎಚ್ಚರಿಸಿದ್ದ ಗುಪ್ತಚರ ಇಲಾಖೆ
ಇನ್ನು ಉಗ್ರರ ದಾಳಿ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ. ಇದಾಗ್ಯೂ ವಾಯುನೆಲೆಯಲ್ಲಿ ಭದ್ರತಾ ವೈಫಲ್ಯವಾಗಿದ್ದು, ಸೇನಾಧಿಕಾರಿಗಳ ಗಂಭೀರ ಚಿಂತನೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್