ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಆಗ್ರಾದಲ್ಲಿ ಮೊಘಲ್ ವಸ್ತುಸಂಗ್ರಹಾಲಯಕ್ಕೆ ಶಿಲಾನ್ಯಾಸ ಮಾಡಿದ ಅಖಿಲೇಶ್

ಮೊಘಲ್ ವಸ್ತುಸಂಗ್ರಹಾಲಯ, ಆಗ್ರಾ ಪಾರಂಪರಿಕ ಕೇಂದ್ರ ಸೇರಿದಂತೆ ನಾಲ್ಕು ಕಟ್ಟಡಗಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ

ಆಗ್ರಾ: ಮೊಘಲ್ ವಸ್ತುಸಂಗ್ರಹಾಲಯ, ಆಗ್ರಾ ಪಾರಂಪರಿಕ ಕೇಂದ್ರ ಸೇರಿದಂತೆ ನಾಲ್ಕು ಕಟ್ಟಡಗಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ ಶಿಲಾನ್ಯಾಸ ನಡೆಸಿದ್ದಾರೆ.

ತಾಜ್ ಮಹಲ್ ನ ಹತ್ತಿರದಲ್ಲೇ ನಿರ್ಮಾಣವಾಗುತ್ತಿರುವ ಈ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿಯವರ ಜೊತೆಗೆ ಪ್ರವಾಸೋದ್ಯಮ ಸಚಿವ ಓಂ ಪ್ರಕಾಶ್ ಸಿಂಗ್ ಮತ್ತಿತರ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದರು.

ಅಧಿಕಾರಿಗಳ ಪ್ರಕಾರ ಮೊಘಲ್ ವಸ್ತುಸಂಗ್ರಹಾಲಯವನ್ನು ಆರು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಇದು ಪ್ರವಾಸಿಗರನ್ನು ಸೆಳೆಯಲು ಕಟ್ಟಲಾಗುತ್ತಿದ್ದು, ಮೊಘಲರ ಶಸ್ತ್ರಾಸ್ತ್ರಗಳು, ಬಟ್ಟೆ ಬರೆಗಳು ಇತರ ಸಾಂಸ್ಕೃತಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ತಿಳಿದುಬಂದಿದೆ.

ಪ್ರವಾಸ, ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಪ್ರಚಾರಕ್ಕೆ ೧೧೦೦೦ ಚದುರ ಮೀಟರ್ ಪ್ರದೇಶದಲ್ಲಿ ಆಗ್ರಾ ಪಾರಂಪರಿಕ ಕೇಂದ್ರವನ್ನು ಕೂಡ ನಿರ್ಮಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT