ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್ ಅವರು, ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಹೇಳಿದ್ದಾರೆ.
ಕಾಶ್ಮೀರಿಗಳಿಗೆ ನಮ್ಮ ದೇಶದ ಬೆಂಬಲ ಮುಂದುವರೆಯಲಿದೆ ಮತ್ತು ಸ್ವಯಂ ನಿರ್ಣಯ ತೆಗೆದುಕೊಳ್ಳುವ ಅವರ ಹಕನ್ನು ಪಾಕಿಸ್ತಾನ ಬೆಂಬಲಿಸಲಿದೆ ಎಂದು ಹುಸೇನ್ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ತಮ್ಮನ್ನು ಭೇಟಿಯಾದ ಹುರಿಯತ್ ನಿಯೋಗದೊಂದಿಗೆ ಮಾತನಾಡಿದ ಹುಸೇನ್, ಕಾಶ್ಮೀರ ಮುಗಿಯದ ಅಜೆಂಡಾ ಎಂದರು. ಅಲ್ಲದೆ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯನ್ನು ಭಾರತ ನಿಲ್ಲಿಸಬೇಕು ಎಂದರು.
ಪಾಕಿಸ್ತಾನದಲ್ಲಿರುವ 'ಕೆ' ಎಂಬ ಪದ ಕಾಶ್ಮೀರಕ್ಕಾಗಿ ಬಂದಿದೆ ಮತ್ತು ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಪಾಕಿಸ್ತಾನ ಅಬ್ಸರ್ವರ್ ವರದಿ ಮಾಡಿದೆ.