ಬೆಂಗಳೂರು: ಬಳ್ಳಾರಿ ನಗರ ಪಾಲಿಕೆ ಆಯುಕ್ತರಿಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಕೀಲರೊಬ್ಬರು ಶನಿವಾರ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಶನಿವಾರ ಬಳ್ಳಾರಿಯ ಕೌಲ್ ಬಜಾರ್ ನಲ್ಲಿರುವ ವಾಲ್ಮೀಕಿ ಭವನದ ಉದ್ಘಾಟನಾ ಸಮಾರಂಭದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಳ್ಳಾರಿ ಪಾಲಿಕೆ ಆಯುಕ್ತ ರಮೇಶ್ ಅವರಿಗೆ ಕಪಾಳಮೋಕ್ಷ ಮಾಡಿರುವುದಾಗಿ ವಕೀಲ ಅಮೃತೇಶ್ ಅವರು ದೂರು ನೀಡಿದ್ದಾರೆ.
ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಪಾಳಮೋಕ್ಷ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಕಪಾಳಮೋಕ್ಷ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ ಸ್ವತಃ ಪಾಲಿಕೆ ಆಯುಕ್ತ ರಮೇಶ್ ಅವರು ಕೂಡಾ, ತನಗೆ ಸಿಎಂ ಕಪಾಳಮೋಕ್ಷ ಮಾಡಿಲ್ಲ. ಬದಿಗೆ ಸರಿದುಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿದ್ದರು.