ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆ 
ಪ್ರಧಾನ ಸುದ್ದಿ

ಭಾಳಾಠಾಕ್ರೆ ಜನ್ಮ ದಿನ ಸ್ಮರಿಸಿದ ಪ್ರಧಾನಿ ಮೋದಿ

ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆ ಅವರ ೯೦ ನೆಯ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

ನವದೆಹಲಿ: ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆ ಅವರ ೯೦ ನೆಯ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

"ಭಾಳಾಸಾಹೇಬ್ ಠಾಕ್ರೆ... ನನ್ನ ಮನಸ್ಸಿನಲ್ಲಿ ಹಲವು ನೆನಪುಗಳು ತುಂಬಿಕೊಂಡಿವೆ. ಅತಿ ಹೆಚ್ಚು ಗೌರವ ಹೊಂದಿರುವ ಅವರ ಜನ್ಮ ದಿನದ ಅಂಗವಾಗಿ  ನನ್ನ ನಮನಗಳು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

೧೯೨೬ ಜನವರಿ ೨೩ ರಂದು ಜನಿಸಿದ್ದ ಠಾಕ್ರೆ, ಮುಂಬೈನ ಆಂಗ್ಲ ದೈನಿಕದಲ್ಲಿ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು ನಂತರ ೧೯೬೦ ರಲ್ಲಿ ತಮ್ಮದೇ ರಾಜಕೀಯ ಪತ್ರಿಕೆ 'ಮಾರ್ಮಿಕ್' ಪ್ರಾರಂಭಿಸಿದ್ದರು.

೧೯೬೬ರಲ್ಲಿ ಶಿವಸೇನಾ ಪಕ್ಷವನ್ನು ಕಟ್ಟಿದ್ದ ಠಾಕ್ರೆ, ಮುಂಬೈ ನ ರಾಜಕೀಯ ಮತ್ತು ವೃತ್ತಿಪರ ಜೀವನದಲ್ಲಿ ಮರಾಠಿ ಭಾಷಿಕರೇ ಇರಬೇಕು ಎಂಬುದನ್ನು ಉಗ್ರವಾಗಿ ಪ್ರತಿಪಾದಿಸಿದವರು.

ಇವರು ನವೆಂಬರ್ ೨೦೧೨ ರಲ್ಲಿ ತೀರಿಹೋದಾಗ, ಶಿವಾಜಿ ಉದ್ಯಾನವನದಲ್ಲಿ ಕೊನೆಯ ವಿಧಿವಿಧಾನಗಳನ್ನು ನಡೆಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT