ಉಗ್ರ 
ಪ್ರಧಾನ ಸುದ್ದಿ

ಜಾವೇದ್ ರಫೀಕ್ 2008ರ ಸರಣಿ ಸ್ಫೋಟದ ರೂವಾರಿ!

ಪರಪ್ಪನ ಅಗ್ರಹಾರ ಜೈಲಿನ ಬಳಿ ಸೆರೆ ಸಿಕ್ಕ ಶಂಕಿತ ಭಯೋತ್ಪಾದಕ ಜಾವೇದ್ ರಫೀಕ್ 2008ರಲ್ಲಿ ದೇಶವನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ...

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಬಳಿ ಸೆರೆ ಸಿಕ್ಕ ಶಂಕಿತ ಭಯೋತ್ಪಾದಕ ಜಾವೇದ್ ರಫೀಕ್ 2008ರಲ್ಲಿ ದೇಶವನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮೂಲತಃ ದೆಹಲಿಯವನ್ನಾದ ರಫೀಕ್ ಇಂಡಿಯನ್ ಮುಜಾಹಿದ್ದೀನ್(ಐಎಂ) ಸಂಘಟನೆ ಸದಸ್ಯ. ಈತ ಐಎಂ 2008ರಲ್ಲಿ ಬ್ಯಾಡ್ ಆಪರೇಷನ್(ಬಿಡಿಎ) ಹೆಸರಿನಲ್ಲಿ ಬೆಂಗಳೂರು, ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧೆಡೆ ನಡೆಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ. ಅಂದು ತಪ್ಪಿಸಿಕೊಂಡಿದ್ದ ಈತನ ವಿರುದ್ಧ ಎನ್ಐಎ ಮತ್ತು ತೆಲಂಗಾಣ ಎಟಿಎಸ್ ಮತ್ತು ಸಿಐಎಯಲ್ಲಿ ಪ್ರಕರಣ ದಾಖಲಾಗಿದ್ದವು.

ಅಂದಿನಿಂದ ಈತನ ಬೆನ್ನುಬಿದ್ದದ್ದ ಪೊಲೀಸರು ಪ್ರತಿ ಚಟುವಟಿಕೆ ಬಗ್ಗೆ ಫೇಸ್ ಬುಕ್ ಬಳಸಿದ ಕಂಪ್ಯೂಟರ್ ಐಪಿ ವಿಳಾಸ ಜಾಲಾಡಿದ್ದರು. ಆದರೆ, ಬೆಂಗಳೂರಿನಲ್ಲೇ ಇದ್ದ ಈತ. ನಾಗನಾಥಪುರದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದುದನ್ನು ಪತ್ತೆ ಮಾಡಿದ್ದ ತನಿಖಾಧಿಕಾರಿಗಳು 4 ತಿಂಗಳಿಂದ ಈತನ ಮೇಲೆ ಕಣ್ಣಿಟ್ಟಿದ್ದರು.

ಈತನ ಪತ್ನಿ ಯಾಸ್ಮಿನ್ ಬೆಂಗಳೂರಿನ ಸಾರಾಯಿ ಪಾಳ್ಯದ ನಿವಾಸಿಯಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಇಬ್ಬರೂ ಮದುವೆಯಾಗಿದ್ದರು. ಈಕೆ ಕೂಡ ರಫೀಕ್ ನ ದೇಶದ್ರೋಹ ಕೆಲಸಗಳಿಗೆ ಸಾಥ್ ನೀಡುತ್ತಿದ್ದಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ತೆಲಂಗಾಣ ಪೊಲೀಸ್ ವಶಕ್ಕೆ: ದೇಶದಲ್ಲಿ ನಡೆದ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಜಾವೇದ್ ರಫೀಕ್ ಮತ್ತು ಪತ್ನಿ ಯಾಸ್ಮಿನ್ ಬಾನು ಅವರನ್ನು ತೆಲಂಗಾಣ ವಿಶೇಷ ಪೊಲೀಸರ ವಶಕ್ಕೆ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT