ನವದೆಹಲಿ: ವಿಶ್ವದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸೂಚ್ಯಂಕ ಪಟ್ಟಿಯೊಂದು ಬಿಡುಗಡೆಯಾಗಿದೆ. ಅದರ ಪ್ರಕಾರ ಭಾರತ 38 ಅಂಕಗಳೊಂದಿಗೆ 76ನೇ ಸ್ಥಾನದಲ್ಲೇ ಮುಂದುವರಿದಿದೆ.
ಕಳೆದ ವರ್ಷವೂ ಭಾರತ ಇದೇ ಸ್ಥಾನದಲ್ಲಿತ್ತು. ನೆರೆಯ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಕಡಿಮೆ ಭ್ರಷ್ಟಾಚಾರ ಇದೆ. ಪಾಕಿಸ್ತಾನ, ಚೀನಾ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಮಿತ್ರ ರಾಷ್ಟ್ರ ರಷ್ಯಾ ಕೂಡ ಭಾರತಕ್ಕಿಂತಲೂ ಹೆಚ್ಚು ಭ್ರಷ್ಟಾಚಾರ ಹೊಂದಿದೆ.
ಪಾಕಿಸ್ತಾನ 30 ಅಂಕಗಳೊಂದಿಗೆ 117, ಚೀನಾ ಮತ್ತು ಶ್ರೀಲಂಕಾ 37 ಅಂಕಗಳೊಂದಿಗೆ 83, ಬಾಂಗ್ಲಾದೇಶ 25 ಅಂಕಗಳೊಂದಿಗೆ 139, ಅಫ್ಘಾನಿಸ್ತಾನ 11 ಅಂಕಗಳೊಂದಿಗೆ 166ನೇ ಸ್ಥಾನದಲ್ಲಿದೆ.
ಇನ್ನು ರಷ್ಯಾ 29 ಅಂಕಗಳೊಂದಿಗೆ 119ನೇ ಸ್ಥಾನದಲ್ಲಿದೆ. ಇನ್ನು ಡೆನ್ಮಾರ್ಕ್ 91 ಅಂಕಗಳೊಂದಿಗೆ 1ನೇ ಸ್ಥಾನದಲ್ಲಿದೆ ಈ ಮೂಲಕ ಕಡಿಮೆ ಭ್ರಷ್ಟಾಚಾರ ಹೊಂದಿದೆ ರಾಷ್ಟ್ರವೆನಿಸಿದೆ. 167ನೇ ಸ್ಥಾನದೊಂದಿಗೆ ಸೊಮಾಲಿಯಾ ಮತ್ತು ಉತ್ತರ ಕೊರಿಯಾ ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿರುವ ರಾಷ್ಟ್ರಗಳೆನಿಸಿಕೊಂಡಿವೆ.