ಕನ್ಹಯ್ಯ ಕುಮಾರ್ - ಸ್ಮೃತಿ ಇರಾನಿ 
ಪ್ರಧಾನ ಸುದ್ದಿ

ಬೈ ಬೈ ಸ್ಮೃತಿ ಇರಾನಿ ಎಂದ ಕನ್ಹಯ್ಯ ಕುಮಾರ್

ಮಾನವ ಸಂಪನ್ಮೂಲ ಸಚಿವರನ್ನು ಬದಲಿಸಿ ಸ್ಮೃತಿ ಇರಾನಿಯವರಿಗೆ ಜವಳಿ ಖಾತೆ ನೀಡಿರುವ ಕ್ರಮವನ್ನು ಬುಧವಾರ ಸ್ವಾಗತಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್,

ನವದೆಹಲಿ: ಮಾನವ ಸಂಪನ್ಮೂಲ ಸಚಿವರನ್ನು ಬದಲಿಸಿ ಸ್ಮೃತಿ ಇರಾನಿಯವರಿಗೆ ಜವಳಿ ಖಾತೆ ನೀಡಿರುವ ಕ್ರಮವನ್ನು ಬುಧವಾರ ಸ್ವಾಗತಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಆದರೆ ಇದು ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ನೀಡಿರುವ 'ಶಿಕ್ಷೆ'ಯಲ್ಲ ಎಂದಿದ್ದಾರೆ. 
ನೆನ್ನೆ ನಡೆದ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯಲ್ಲಿ ಸ್ಮೃತಿ ಇರಾನಿಯವರನ್ನು ಮಾನವ ಸಂಪನ್ಮೂಲ ಖಾತೆಯಿಂದ ತೆಗೆದು ಜವಳಿ ಖಾತೆ ನೀಡಲಾಗಿದೆ. ಆದರೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ದಲಿತ ಸಂಶೋಧಕ ವೇಮುಲಾ ಮಾಡಿಕೊಂಡ ಪ್ರಕರಣಕ್ಕೆ ಇನ್ನು ನ್ಯಾಯ ಒದಗಿಸಲಾಗಿಲ್ಲ ಎಂದು ಕನ್ಹಯ್ಯ ಹೇಳಿದ್ದಾರೆ. 
"ರೋಹಿತ್ ಅವರಿಗೆ ನ್ಯಾಯ ಇನ್ನು ಸಿಗಬೇಕು. ಸಂಪುಟ ಪುನಾರಚನೆ ಇದಕ್ಕೆ ಶಿಕ್ಷೆ ಅಲ್ಲ. .. ಬೈ ಬೈ ಸ್ಮೃತಿ ಇರಾನಿ " ಎಂದು ಕನ್ಹಯ್ಯ ಹೇಳಿದ್ದಾರೆ. 
ವೇಮುಲಾ ಅವರಿಗೆ ಕಿರುಕಳಿ ನೀಡಿ ಅದು ಆತ್ಮಹತ್ಯೆಗೆ ತಿರುಗಿದ್ದಕ್ಕೆ ಕಾರಣರಾಗಿದ್ದಾರೆ ಎಂದು ದೂಷಿಸಿ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಜೈಲಿಗೆ ಹಾಕಬೇಕು ಎಂದು ಕೂಡ ಅವರು ಹೇಳಿದ್ದಾರೆ. 
ಪಿ ಎಚ್ ಡಿ ವಿದ್ಯಾರ್ಥಿ ವೇಮುಲಾ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಜನವರಿ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಮೃತಿ ಇರಾನಿ, ಬಂಡಾರು ದತ್ತಾತ್ರೇಯ ಮತ್ತು ಉಪಕುಲಪತಿ ನಡುವೆ ನಡೆದ ಪತ್ರ ವ್ಯವಹಾರ ಈ ಆತ್ಮಹತ್ಯೆಗೆ ಎಡೆಮಾಡಿಕೊಟ್ಟಿತ್ತು ಎಂದು ಆರೋಪಿಸಲಾಗಿತ್ತು. 
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಖಂಡನೊಂದಿಗೆ ನಡೆದ ಗಲಾಟೆಗಳಿಂದ ವೇಮುಲಾ ಒಳಗೊಂಡಂತೆ ಐವರು ದಲಿತ ವಿದ್ಯಾರ್ಥಿಗಳನ್ನು ವಿದ್ಯಾಥಿನಿಲಯದಿಂದ ವಜಾ ಮಾಡಲಾಗಿತ್ತು. 
ಮತ್ತೊಂದು ಪ್ರಕರಣದಲ್ಲಿ, ಕನ್ಹಯ್ಯ ಕುಮಾರ್ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಕೇಂದ್ರ ಸರ್ಕಾರದ ಹಿಡಿತದಲ್ಲರುವ ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿದ್ದರು. ನಂತರ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT