ಆಂಕಾರ/ನವದೆಹಲಿ: ಟರ್ಕಿಯಲ್ಲಿ ಸೇನಾ ದಂಗೆಯಿಯಿಂದ ಎದ್ದಿರುವ ಗಲಭೆಯಲ್ಲಿ ಅಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆಗೆ ಟರ್ಕಿ ರಾಯಭಾರ ಕಚೇರಿ ಮುಂದಾಗಿದೆ. ಸೇನಾ ದಂಗೆಯ ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕ ಪ್ರದೇಶಗಳಿಗೆ ಬರದಂತೆ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಉಳಿಯುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ ನೀಡಿದೆ. ಅಲ್ಲದೆ ಸಹಾಯಕ್ಕಾಗಿ ತುರ್ತು ಸಹಾಯವಾಣಿಯನ್ನು ಕೂಡ ಸ್ಥಾಪಿಸಲಾಗಿದೆ.
"ಆಂಕಾರದಲ್ಲಿರುವ ನಮ್ಮ ರಾಯಭಾರಿ ಕಚೇರಿ ಟರ್ಕಿಯಲ್ಲಿರುವ ಎಲ್ಲ ಭಾರತೀಯರಿಗೆ ಸೂಚಿಸುವುದೇನೆಂದರೆ ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕ ಪ್ರದೇಶಗಳಿಂದ ದೂರವಿರಿ ಮತ್ತು ಒಳಾಂಗಣ ಪ್ರದೇಶಗಳಲ್ಲಿ ಉಳಿಯಿರಿ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಭಾರತೀಯರಿಗಾಗಿ ಸ್ಥಾಪಿಸಲಾಗಿರುವ ಸಹಾಯವಾಣಿ ಇಂತಿವೆ.
ಆಂಕಾರದಲ್ಲಿ: +905303142203
ಇಸ್ತಾನಬುಲ್ ನಲ್ಲಿ: +905305671095
ಶುಕ್ರವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಟರ್ಕಿ ಸೇನೆ ರಾಷ್ಟ್ರವನ್ನು ಸೇನಾಡಳಿತಕ್ಕೆ ಒಳಪಡಿಸಿರುವುದಾಗಿ ಹೇಳಿದೆ.