ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಅಹಮದಾಬಾದ್: ಗುಜರಾತ್ ನ ಸೌರಾಷ್ಟ್ರದ ಉನಾ ತಾಲ್ಲೂಕಿನಲ್ಲಿ ಗೋರಕ್ಷಕ ಸಮಿತಿಯ ಕೆಲವರು ಸತ್ತ ಗೋವಿನ ಚರ್ಮವನ್ನು ಸಾಗಿಸುತ್ತಿದ್ದ ನಾಲ್ವರು ದಲಿತ ಯುವಕರನ್ನು ಥಳಿಸಿ ದೌರ್ಜನ್ಯವೆಸಗಿದ್ದ ಪ್ರಕಾರಣದಲ್ಲಿ ಗುಜರಾತ್ ನಾದ್ಯಂತ ನೆನ್ನೆ ಮತ್ತು ಇಂದು ಪ್ರತಿಭಟನೆಗಳಾಗಿದ್ದವು. ಇಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಾಯದ ಭರವಸೆ ನೀಡಿದ್ದಾರೆ.
ಮೋಟ ಸಮಾಧಿಯಾಳ ಗ್ರಾಮದಲ್ಲಿ ಥಳಿತಕ್ಕೆ ಒಳಗಾಗಿದ್ದ ದಲಿತ ಯುವಕನ ತಂದೆ ತಮಗಾಗಿರುವ ಗಾಯಗಳನ್ನು ರಾಹುಲ್ ಗಾಂಧಿ ಅವರಿಗೆ ತೋರಿಸಿದ್ದಾರೆ.
ತಮ್ಮ ಕೈಲಾದ ಸಹಾಯವನ್ನು ಮಾಡುವ ಭರವಸೆ ನೀಡಿದ ರಾಹುಲ್ ಗಾಂಧಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ.
ನೆನ್ನೆಯಷ್ಟೇ ಈ ಕುಟುಂಬಗಳನ್ನು ಭೇಟಿ ಮಾಡಿದ್ದ ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್, ಕುಟುಂಬಗಳಿಗೆ ಧನಸಹಾಯ ಘೋಷಿಸಿದ್ದಲ್ಲದೆ ರಕ್ಷಣೆ ನೀಡುವ ಭರವಸೆ ಕೂಡ ನೀಡಿದ್ದರು.
ಜುಲೈ 11 ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಹೆಚ್ಚುವರಿ ಏಳು ಜನರನ್ನು ಬಂಧಿಸಿದ್ದಾರೆ.