ಪ್ರಧಾನ ಸುದ್ದಿ

24 ವಾರಗಳ ಗರ್ಭಪಾತಕ್ಕೆ ಮನವಿ; ಅರ್ಜಿ ಆಲಿಸಲಿರುವ ಸುಪ್ರೀಂ ಕೋರ್ಟ್

Guruprasad Narayana
ನವದೆಹಲಿ: ಭ್ರೂಣದ ಬೆಳವಣಿಗೆ ಸರಿಯಿಲ್ಲವೆಂದು ರೇಪ್ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ 24 ವಾರಗಳ ಗರ್ಭಪಾತಕ್ಕೆ ಅವಕಾಶ ಕೋರಿ ಅರ್ಜಿ ಹಾಕಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ. 
ಭ್ರೂಣದ ಹೊಟ್ಟೆಯ ಕವಚ ಸರಿಯಾಗಿ ಬೆಳವಣಿಗೆಯಾಗಿಲ್ಲ ಮತ್ತು ಇದರ ಪರಿಣಾಮ ಕರುಳು ಹೊಟ್ಟೆಯಿಂದಾಚೆಗೆ ಬೆಳೆಯುತ್ತಿದೆ ಎಂದು ವೈದ್ಯರು ನೀಡಿರುವ ವರದಿಯನ್ನು ಪರಿಶೀಲಿಸಿರುವ ನ್ಯಾಯಾಧೀಶ ಶಿಂಗ್ ಖೇಹರ್, ಕುರಿಯನ್ ಜೋಸೆಫ್ ಮತ್ತು ಅರುಣ್ ಮಿಶ್ರಾ ಇವರಗಳನ್ನು ಒಳಗೊಂಡ ನ್ಯಾಯಪೀಠ ಶುಕ್ರವಾರ ವಾದವನ್ನು ಆಲಿಸಲಿದೆ. 
ಭ್ರೂಣದ ತಲೆಬುರುಡೆ ಕೂಡ ಸರಿಯಾಗಿ ಬೆಳವಣಿಗೆಯಾಗಿಲ್ಲ ಎಂದು ವರದಿ ತಿಳಿಸಿದೆ. ಈ ಭ್ರೂಣ ಬದುಕುಳಿಯುವ ಸಾಧ್ಯತೆ ಸೊನ್ನೆಯಿಂದ ಕೆಲವು ಘಂಟೆಗಳವರೆಗೆ ಮಾತ್ರ ಎಂದು ವರದಿ ಹೇಳಿದೆ. 
1971 ರ ವೈದ್ಯಕೀಯ ಗರ್ಭಪಾತ ಕಾಯ್ದೆಯ ಪ್ರಕಾರ 20 ವಾರಗಳ ನಂತರ ಗರ್ಭಧಾರಣೆ ಕೊನೆಗಾಣಿಸುವ ಅವಕಾಶ ಇಲ್ಲವಾದ್ದರಿಂದ ಇದಕ್ಕೆ ಅವಕಾಶ ಮಾಡಿಕೊಡಲು ಅರ್ಜಿದಾರ ಕೋರ್ಟ್ ಗೆ ಮನವಿ ಮಾಡಿದ್ದಾರೆ. 
ತಾಯಿಯ ಜೀವನಕ್ಕೆ ಅಪಾಯವಿದ್ದರೆ ಮಾತ್ರ 20 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶ ಈ ಕಾಯ್ದೆಯಲ್ಲಿದೆ. 
ಆದರೆ ಈ ಪ್ರಕರಣದಲ್ಲಿ ತಾಯಿಯ ಜೀವನಕ್ಕೆ ಯಾವುದೇ ತೊಂದರೆ ಇಲ್ಲ ಎಂದಿರುವ ವರದಿ ಭ್ರೂಣದ ಬೆಳವಣಿಗೆ ಅಸಹಜವಾಗಿದ್ದು ಅದು ಬದುಕುಳಿಯುವ ಸಾಧ್ಯತೆ ಕ್ಷೀಣ ಎಂದಿದೆ. 
SCROLL FOR NEXT