ಜಂಟೀ ಸಮರಾಭ್ಯಾಸ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಚೀನಾ ವಿರೋಧದ ನಡುವೆಯೇ ಭಾರತ, ಅಮೆರಿಕ, ಜಪಾನ್ ಸಹಭಾಗಿತ್ವದ "ಮಲಬಾರ್"-2 ಗೆ ಸಿದ್ಧತೆ!

ಭಾರತ, ಅಮೆರಿಕ ಮತ್ತು ಜಪಾನ್ ಸೇನಾ ಪಡೆಯ ಜಂಟೀ ಸಮರಾಭ್ಯಾಸ "ಮಲಬಾರ್"ಗೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ವಿರೋಧ ವ್ಯಕ್ತಪಡಿಸಿದ್ದರೂ, ಇದರ 2ನೇ ಹಂತದ ಸಮರಾಭ್ಯಸಕ್ಕೆ ಮೂರು ದೇಶಗಳು ಸಿದ್ಧತೆ ನಡೆಸಿವೆ.

ನವದೆಹಲಿ: ಭಾರತ, ಅಮೆರಿಕ ಮತ್ತು ಜಪಾನ್ ಸೇನಾ ಪಡೆಯ ಜಂಟೀ ಸಮರಾಭ್ಯಾಸ "ಮಲಬಾರ್"ಗೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ವಿರೋಧ ವ್ಯಕ್ತಪಡಿಸಿದ್ದರೂ, ಇದರ 2ನೇ ಹಂತದ  ಸಮರಾಭ್ಯಸಕ್ಕೆ ಮೂರು ದೇಶಗಳು ಸಿದ್ಧತೆ ನಡೆಸಿವೆ.

ಮೂಲಗಳ ಪ್ರಕಾರ ಅಮೆರಿಕ ನೌಕಾಪಡೆ, ಜಪಾನ್ ನೌಕಪಡೆ ಹಾಗೂ ಭಾರತೀಯ ನೌಕಾಪಡೆಯ ತುಕಡಿಗಳು ಈ ಬೃಹತ್ ಜಂಟೀ ಸಮರಾಭ್ಯಾಸದಲ್ಲಿ ತೊಡಗುತ್ತಿದ್ದು, ಜಪಾನ್ ನ ಪಶ್ಚಿಮ  ಫೆಸಿಫಿಕ್ ಮಹಾಸಾಗರದಲ್ಲಿ ಜಂಟೀ ಸಮರಾಭ್ಯಾಸ ನಡೆಸಲು ಮುಂದಾಗಿವೆ. ಚೀನಾ ದೇಶ ತನ್ನದೆಂದು ವಾದಿಸುತ್ತಿರುವ ದ್ವೀಪ ಸಮೂಹ ಸಮೀಪದಲ್ಲಿಯೇ ಈ ಮೂರು ದೇಶಗಳು  ಜಂಟಿಯಾಗಿ ಸಮರಾಭ್ಯಾಸ ನಡೆಸುತ್ತಿರುವುದು ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತೀಯ ನೌಕಾಪಡೆಯ ಪ್ರಮುಖ ಸಮರನೌಕೆಗಳು ಈ ಜಂಟೀ ಸಮರಾಭ್ಯಾಸದಲ್ಲಿ ತೊಡಗುವ ಸಾಧ್ಯತೆಗಳಿದ್ದು, ಜಲಾಂತರ್ಗಾಮಿ ನೌಕೆಗಳು, ನೌಕಾಪಡೆಯ ಯುದ್ಧ ವಿಮಾನಗಳು ಮತ್ತು  ಹೆಲಿಕಾಪ್ಟರ್ ಗಳು ಈ ಬೃಹತ್ ಸಮರಾಭ್ಯಾಸದಲ್ಲಿ ತೊಡಗಲಿವೆ. ವಿಶ್ವದ ಮೂರು ಪ್ರಬಲ ರಾಷ್ಟ್ರಗಳಾದ ಅಮೆರಿಕ, ಜಪಾನ್ ಮತ್ತು ಭಾರತ ದೇಶಗಳು ಈ ಬೃಹತ್ ಸಮರಾಭ್ಯಾಸದಲ್ಲಿ  ತೊಡಗಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಿಸಿದ್ದು, ಅದೂ ಕೂಡ ತನ್ನದೆಂದು ವಾದ ಮಾಡುತ್ತಿರುವ ಪಶ್ಚಿಮ ಫೆಸಿಫಿಕ್ ಮಹಾಸಾಗರದ ಸಮೀಪದಲ್ಲಿಯೇ ಈ ಬೃಹತ್  ಸಮರಾಭ್ಯಾಸಕ್ಕೆ 3 ದೇಶಗಳು ಮುಂದಾಗಿರುವು ಚೀನಾದೆ ತಲೆನೋವು ಹೆಚ್ಚಾಗಲು ಕಾರಣವಾಗಿದೆ.

ಸೇನಾ ಮೂಲಗಳ ಪ್ರಕಾರ ಪಶ್ಚಿಮ ಫೆಸಿಫಿಕ್ ಸಾಗರದ ಪಶ್ಚಿಮ ತೈವಾನ್ ನ ಕರಾವಳಿಯ ಸುಮಾರು 220 ಕಿ.ಮೀ ವ್ಯಾಪ್ತಿಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ ಎಂದು ತಿಳಿದುಬಂದಿದೆ.  ಚೀನಾ ತನ್ನದೆಂದು ವಾದ ಮಾಡುತ್ತಿರುವ ಡಿಯೋಯು ದ್ವೀಪ ಸಮೂಹ ಕೂಡ ಇಲ್ಲಿಗೆ ಸಮೀಪದಲ್ಲಿದೆ. ಡಿಯೋಯು ದ್ವೀಪ ಸಮೂಹದ ಪಕ್ಕದಲ್ಲಿಯೇ ಇರುವ ಸೆನ್ಕಕು ದ್ವೀಪದ ಬಳಿಯಲ್ಲಿ  ಭಾರತ, ಅಮೆರಿಕ ಮತ್ತು ಜಪಾನ್ ನೌಕಾಪಡೆಗಳು ತಮ್ಮ ಸಮರಕಲೆಗಳನ್ನು ಪ್ರದರ್ಶನ ಮಾಡಲಿವೆ.

ಇದೇ ಮೂರು ದೇಶಗಳ ಸಹಭಾಗಿತ್ವದಲ್ಲಿ ಕಳೆದ ಬಾರಿ ನಡೆದ ಮಲಬಾರ್ ಸಮರಾಭ್ಯಾಸಕ್ಕೂ ಚೀನಾ ಭಾರಿ ವಿರೋಧ ವ್ಯಕ್ತಪಡಿಸಿತ್ತು. ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ  ಸಾಧಿಸುವ ಮೂಲಕ ವಿಶ್ವ ವಾಣಿಜ್ಯ ವ್ಯವಸ್ಥೆಯಲ್ಲಿ ಸಿಂಹಪಾಲು ಪಡೆಯುವ ಚೀನಾದ ದುರುದ್ದೇಶಕ್ಕೆ ಇದೀಗ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಅಡ್ಡಗಾಲು ಹಾಕಿದ್ದು, ಚೀನಾ  ಪ್ರಾಬಲ್ಯ ಮುರಿಯಲು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಇದರ ಪರಿಣಾಮವಾಗಿಯೇ ಸತತ ಸಮರಾಭ್ಯಾಸ ನಡೆಸುವ ಮೂಲಕ ಚೀನಾದ ಪ್ರಾಬಲ್ಯ ಮುರಿಯಲು ಈ ಮೂರು ದೇಶಗಳು ಯತ್ನಿಸುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT