ಪ್ರಧಾನ ಸುದ್ದಿ

ವಿಜಯನ್ ಮಾಧ್ಯಮಗಳನ್ನು ದೂರವಿಡುತ್ತಿದ್ದಾರೆ: ಕಾಂಗ್ರೆಸ್

Guruprasad Narayana

ತಿರುವನಂತಪುರಂ: ಮಾಧ್ಯಮಗಳನ್ನು ದೂರವಿಡುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ವಿ ಎಂ  ಸುಧೀಂದ್ರನ್ ಶನಿವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಸುಧೀಂದ್ರನ್ "ಗೊತ್ತಿಲ್ಲದ ಯಾವುದೋ ಕಾರಣಗಳಿಗೆ ಮಾಧ್ಯಮಗಳ ಮುಂದೆ ವಿಜಯನ್ ಕಾಣಿಸಿಕೊಳ್ಳದಿರುವುದು ವಿಚಿತ್ರವಾಗಿದೆ" ಎಂದಿದ್ದಾರೆ.

"ನಾವು ರಾಜಕೀಯಕ್ಕೆ ಪ್ರವೇಶ ಪಡೆದ 1970 ಇಸವಿಯಿಂದ ಹೇಳಬಲ್ಲೆ. ಅವಾಗಿಲಿಂದಲೂ ವಾರಕ್ಕೊಮ್ಮೆಯಾದರೂ ಮತ್ತು ಸಂಪುಟ ಸಭೆ ನಡೆದ ಮೇಲಾದರೂ ಮುಖ್ಯಮಂತ್ರಿಗಳು ಮಾಧ್ಯಮಗಳೊಂದಿಗೆ ಮಾತನಾಡುವುದು ವಾಡಿಕೆ. ಆದರೆ ವಿಜಯನ್ ಅದನ್ನು ಮಾಡುತ್ತಿಲ್ಲ" ಎಂದು ಸುಧೀಂದ್ರನ್ ಹೇಳಿದ್ದಾರೆ.

ವಿಜಯನ್ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಮೇ 25 ರಂದು ಮೊದಲ ಸಂಪುಟ ಸಭೆ ಕರೆದಿದ್ದರು ಮತ್ತು ಅಂದು ಮಾತ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದು. ಅದರ ನಂತರ ಸಂಪುಟ ಸಭೆಯ ಚರ್ಚೆಯ ವಿಷಯಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಲೇ ಇಲ್ಲ.

"ಮಾಧ್ಯಮಗಳನ್ನು ದೂರವಿಟ್ಟ ಬಗೆಗೆ ನಮಗೆ ಆಶ್ಚರ್ಯವಾಗುತ್ತಿದೆ. ಮುಖ್ಯಮಂತ್ರಿ ಎಂದಿಗೂ ಜನರಿಗೆ ಉತ್ತರ ನೀಡಬೇಕಿರುತ್ತದೆ ಅದು ಮಾಧ್ಯಮಗಳ ಮೂಲಕ ನಡೆಯುತ್ತದೆ. ನಾವು ಒಂದು ಹೇಳುವುದಕ್ಕೆ ಇಷ್ಟ ಪಡುತ್ತೇವೆ. ಕೇರಳದಂತಹ ರಾಜ್ಯದಲ್ಲಿ ಈ ಹೊಸ ಸಂಸ್ಕೃತಿ ಸರಿಯಲ್ಲ" ಎಂದು ಸುಧೀಂದ್ರನ್ ಹೇಳಿದ್ದಾರೆ.

ವಿಜಯನ್ ಅವರಿಗೂ ಮುಂಚಿನ ಮುಖ್ಯಮಂತ್ರಿ ಊಮನ್ ಚಾಂಡಿ ಎಂದಿಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಉತ್ಸುಕರಾಗಿರುತ್ತಿದ್ದರು.

SCROLL FOR NEXT