ನವದೆಹಲಿ: ಜೆ ಎನ್ ಯು ನಲ್ಲಿ ಕೇಳಿಬಂದ ದೇಶವಿರೋಧಿ ಘೋಷಣೆಗೂ ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಗೂ ನೇರವಾದ ಸಂಬಂಧವಿಲ್ಲ ಎಂದು ದೆಹಲಿ ಸರ್ಕಾರದ ವರದಿಯೊಂದು ಹೇಳಿದೆ.
ಕನ್ಹಯ್ಯ ಕುಮಾರ್ ಹಾಗೂ ಜೆಎನ್ ಯು ವಿವಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರಕ್ಕೆ ಈಗಾಗಲೆ ವರದಿ ಸಲ್ಲಿಸಿದ್ದೇನೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಹೇಳಿಕೆ ನೀಡಿದ್ದಾರೆ. ಕನ್ಹಯ್ಯ ಕುಮಾರ್ ಹಾಗೂ ದೇಶವಿರೋಧಿ ಘೋಷಣೆಗೂ ನೇರವಾದ ಸಂಬಂಧ ಇರುವುದು ಕಂಡುಬಂದಿಲ್ಲ, ಆದರೆ ಜೆಎನ್ ಯು ಕ್ಯಾಂಪಸ್ ನಲ್ಲಿ ದೇಶವಿರೋಧಿ ಘೋಷಣೆ ಕೇಳಿಬಂದಿರುವುದು ನಿಜ, ಈ ಬಗ್ಗೆ ಯಾವುದೇ ಅನುಮಾನಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಘಟನೆ ಕುರಿತಾದ ವಿಡಿಯೊದ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಹೈದರಾಬಾದ್ ಗೆ ಕಳಿಸಲಾಗಿತ್ತು, ಫೆ,9 ರಂದು ನಡೆದಿದ್ದ ದೇಶವಿರೋಧಿ ಘೋಷಣೆಗೆ ಘಟನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿತ್ತು.