ಅಗರ್ತಲ: ೨೪ ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿದಂತೆ ೩೫ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅನಧಿಕೃತವಾಗಿ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ೨೩ ಬಾಂಗ್ಲಾದೇಶದ ಪ್ರಜೆಗಳನ್ನು ಬುಧವಾರ ಪೊಲೀಸರು ಬಂಧಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
"ಬಿ ಎಸ್ ಎಫ್ ಸಿಬ್ಬಂದಿಗಳು ೩೫ ಬಾಂಗ್ಲಾದೇಶೀಯರನ್ನು, ಎಲ್ಲರೂ ಬುಡಕಟ್ಟಿನವರು ಉತ್ತರ ತ್ರಿಪುರಾದ ರೈಶ್ಯಾಬರಿಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಮಾರಿ ಬೇರೆ ವಸ್ತುಗಳನ್ನು ಕೊಳ್ಳಲು ಬಂದಿದ್ದಾಗ ಬಂಧಿಸಿದ್ದಾರೆ" ಎಂದು ಪೊಲೀಸ್ ವಕ್ತಾರ ಉತ್ತಮ್ ಕುಮಾರ್ ಭೌಮಿಕ್ ತಿಳಿಸಿದ್ದಾರೆ.
ನಂತರ ಬಂಧಿತರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಾಂಗ್ಲಾದ ಪ್ರಜೆಗಳು ಚಿತ್ತಗಾಂಗ್ ಬೆಟ್ಟಗಳ ಮೂಲಕ ತ್ರಿಪುರಾಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಈಶಾನ್ಯ ರಾಜ್ಯ ತ್ರಿಪುರಾ ಬಾಂಗ್ಲಾದೇಶದ ಜೊತೆಗೆ ೮೫೬ ಕಿಮೀ ಗಡಿಯನ್ನು ಹೊಂದಿದೆ.