ಪ್ರಧಾನ ಸುದ್ದಿ

ಭಾರತೀಯ ಸೇನೆಗೆ ಆಕಾಶ್ ಬದಲು ಇಸ್ರೇಲ್ ನಿರ್ಮಿತ ಕ್ಷಿಪಣಿ

Srinivas Rao BV

ನವದೆಹಲಿ: ಭಾರತೀಯ ಸೇನೆ ದೇಶಿಯ ನಿರ್ಮಿತ ಆಕಾಶ್ ಕ್ಷಿಪಣಿಗಳ ಬದಲು ಇಸ್ರೇಲ್ ನಿರ್ಮಿತ ಭೂಕಕ್ಷೆಯಿಂದ- ಆಕಾಶಕ್ಕೆ ಜಿಗಿಯುವ (ಕ್ಯೂ ಆರ್ ಎಸ್ಎಎಂಎಸ್) ಕ್ಷಿಪಣಿಯನ್ನು ಸೇರ್ಪಡೆಗೊಳಿಸಿಕೊಳ್ಳಲು ನಿರ್ಧರಿಸಿದೆ.

ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ದೇಶೀಯ ನಿರ್ಮಿತ ಆಕಾಶ್ ಕ್ಷಿಪಣಿಗಳ ಬದಲಿಗೆ ಭಾರತೀಯ ಸೇನೆ ಇಸ್ರೇಲ್ ನಿರ್ಮಿತ ಕ್ಷಿಪಣಿಗಳನ್ನು ಸೇನೆಗೆ ಸೇರ್ಪಡೆಗೊಳಿಸಿಕೊಳ್ಳಲು ನಿರ್ಧರಿಸಿದ್ದು, ಇದರಿಂದ ಮೆಕ್ ಇನ್ ಇಂಡಿಯಾ ಗೆ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಿದೆ.

ಈಗಾಗಲೇ ಆಕಾಶ್ ಕ್ಷಿಪಣಿಯನ್ನು ಸೇನೆಗೆ ಸೇರಿಸಿಕೊಳ್ಳಲಾಗಿದ್ದು ಅದೇ ಮಾದರಿಯ ಮತ್ತಷ್ಟು ಕ್ಷಿಪಣಿಗಳನ್ನು ಸೇರಿಸಿಕೊಳ್ಳದಿರಲು ಸೇನೆ ನಿರ್ಧರಿಸಿದೆ. ಸ್ಥಿರತೆಯ ಸಮಸ್ಯೆಯಿಂದಾಗಿ ಆಕಾಶ್ ಕ್ಷಿಪಣಿಗಳನ್ನು ಸೇನೆಗೆ ಸೇರಿಸಿಕೊಳ್ಳದೆ ಇರಲು ನಿರ್ಧರಿಸಿರುವ ಸೇನೆ ರಷ್ಯಾ, ಸ್ವೀಡನ್ ನ ಕ್ಷಿಪಣಿಗಳನ್ನು ಪರಿಗಣಿಸಿತ್ತು. ಆದರೆ ಇಸ್ರೇಲ್ ಕ್ಷಿಪಣಿಯನ್ನು ಅಂತಿಮಗೊಳಿಸಿದೆ.

SCROLL FOR NEXT