ಬ್ರಸೆಲ್ಸ್: ಒಬ್ಬ ಭಾರತೀಯನೂ ಸೇರಿದಂತೆ ೨೦ ಜನರನ್ನು ಕೊಂದು ಹಾಕಿ, 100 ಹೆಚ್ಚು ಜನರನ್ನು ಗಾಯಗೊಳಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಬಾಂಬ್ ದಾಳಿ ಘಟನೆ ನಡೆದ ಮೆಲ್ಬೀಕ್ ಮೆಟ್ರೊ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತ್ರಸ್ತರಿಗೆ ಗೌರವ ಸಲ್ಲಿಸಿದ್ದಾರೆ.
ಬೆಲ್ಜಿಯಂ ರಾಜಧಾನಿಯ ಸಬ್ವೇ ನಲ್ಲಿ ಮೃತಪಟ್ಟವರಿಗೆ ಗೌರವಾಗಿ ಪುಷ್ಪ ಸಮರ್ಪಣೆ ಮಾಡಿದ್ದಾರೆ ಮೋದಿ.
ಮೆಟ್ರೊ ನಿಲ್ದಾಣದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಭಾರತೀಯ ಟೆಕ್ಕಿ ರಾಘವೇಂದ್ರ ಗಣೇಶನ್ ಕೂಡ ಒಬ್ಬರು. ಈ ವಾರವಷ್ಟೇ ಅವರ ಸಾವನ್ನು ಬೆಲ್ಜಿಯಂ ಅಧಿಕಾರಿಗಳು ಧೃಢೀಕರಿಸಿದ್ದರು.
ಭಾರತ - ಯೂರೋಪಿಯನ್ ಯೂನಿಯನ್ ಶೃಂಗ ಸಭೆಯಲ್ಲಿ ಭಾಗವಹಿಸಲು ಬ್ರಸೆಲ್ಸ್ ಗೆ ತೆರಳಿರುವ ಮೋದಿ, ಭಯೋತ್ಪಾದನೆಯ ಬಗ್ಗೆಯೂ ಚರ್ಚಿಸಲಿದ್ದಾರೆ.