ಶಿವಕುಮಾರಸ್ವಾಮಿ 
ಪ್ರಧಾನ ಸುದ್ದಿ

ಗರ್ಲ್ ಫ್ರೆಂಡ್ ಜೊತೆ ಬೆತ್ತಲಾಗಿ ಸಿಕ್ಕಿಬಿದ್ದ ಲೀಕ್ ಕಿಂಗ್ ಪಿನ್ ಶಿವಕುಮಾರಸ್ವಾಮಿ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪ್ರತಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರಸ್ವಾಮಿ ಅಲಿಯಾಸ್ ಗುರೂಜಿ ತನ್ನ ಫ್ರೆಂಡ್ ಒಬ್ಬರ ಜೊತೆ...

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರಸ್ವಾಮಿ ಅಲಿಯಾಸ್ ಗುರೂಜಿ ತನ್ನ ಗರ್ಲ್ ಫ್ರೆಂಡ್ ಒಬ್ಬರ ಜೊತೆ ಬೆತ್ತಲಾಗಿದ್ದ ಸಂದರ್ಭದಲ್ಲೇ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೌದು, ಕಳೆದ ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಲೀಕ್ ಕಿಂಗ್ ಪಿನ್ ನನ್ನು ಸಿಐಡಿ ಪೊಲೀಸರು ನಿನ್ನೆ ರಾತ್ರಿ ಬನ್ನೇರುಘಟ್ಟ ರಸ್ತೆಯ ಗಾರೇಬಾವಿಪಾಳ್ಯದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬಂಧಿಸಿದ್ದು, ಈ ವೇಳೆ ಗರ್ಲ್ ಫ್ರೆಂಡ್ ಒಬ್ಬಳ ಜೊತೆ ಇದ್ದ ಶಿವಕುಮಾರ್ ಮೈಮೇಲೆ ಒಂದು ತುಂಡು ಬಟ್ಟೆ ಇರಲಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಗರ್ಲ್ ಫ್ರೆಂಡ್ ಒಬ್ಬಳು ನೀಡಿದ್ದ ಮಾಹಿತಿ ಮೇರೆಗೆ ಶಿವಕುಮಾರ್ ನನ್ನು ಬಂಧಿಸಲಾಗಿದ್ದು, ಪ್ರತಿದಿನ ಒಬ್ಬೊಬ್ಬ ಗರ್ಲ್ ಫ್ರೆಂಡ್ ಮನೆಗೆ ಹೋಗುತ್ತಿದ್ದ ಗುರೂಜಿಯನ್ನು ಕೊನೆಗೆ ಆ ಗರ್ಲ್ ಫ್ರೆಂಡ್ ಲಿಂಕ್ ನಿಂದಲೇ ಸಿಐಡಿ ಬಲೆಗೆ ಬಿದ್ದಿದ್ದಾನೆ.
ಪ್ರತಿದಿನ ವಾಸ್ತವ್ಯ ಬದಲಿಸುತ್ತಿದ್ದ ಕಿಂಗ್ ಪಿನ್ ಗುರೂಜಿ, ಮಾಲೂರು, ಆನೇಕಲ್, ಮಂಗಳೂರಿನ ಕಡೆ ಹೋಗಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆರೋಪಿಯಿಂದ 50 ಸಾವಿರ ರುಪಾಯಿ ನಗದು, ನಾಲ್ಕು ಸಿಮ್ ಕಾರ್ಡ್ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT