ಮುಂಬಯಿ : ಶೇ. 95ರಷ್ಟು ಬಾಂಬೆ ಐಐಟಿ ವಿದ್ಯಾರ್ಥಿಗಳು ನಾವಿನ್ನೂ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಿದ್ದಾರೆ. ಐಐಟಿ ಬಾಂಬೆಯಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ನಂಬಿಕೆಗಳು ಮತ್ತು ಜೀವನಶೈಲಿಯ ಕುರಿತು ಸಮೀಕ್ಷೆ ನಡೆಸಲಾಯಿತು.
ಕಾಲೇಜು ಜೀವನದಲ್ಲೇ ವಿದ್ಯಾರ್ಥಿಗಳು ಲೈಂಗಿಕ ಕ್ರಿಯೆ ನಡೆಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಈ ಬಗ್ಗೆ ಐಐಟಿ ಬಾಂಬೆ ವಿದ್ಯಾರ್ಥಿಗಳನ್ನು ಮಾತನಾಡಿಸಿದ ಸಂದರ್ಭದಲ್ಲಿ ಬೇರೆಯದೇ ಉತ್ತರನೀಡಿದ್ದಾರೆ. ಶೇ. 95ರಷ್ಟು ಬಾಂಬೆ ಐಐಟಿ ವಿದ್ಯಾರ್ಥಿಗಳು ನಾವಿನ್ನೂ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಿದ್ದಾರೆ. ಇನ್ನು ಶೇ. 75ರಷ್ಟು ವಿದ್ಯಾರ್ಥಿಗಳು ಸಲಿಂಗಕಾಮಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಹೇಳಿದ್ದಾರೆ.
ಸಮೀಕ್ಷೆಯ ವೇಳೆ ಶೇ. 30ರಷ್ಟು ವಿದ್ಯಾರ್ಥಿಗಳು ತಾವು ಪ್ರೇಮಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.875 ವಿದ್ಯಾರ್ಥಿಗಳ ಪೈಕಿ 254 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅವರ ಪೈಕಿ ಶೇ. 47ರಷ್ಟು ಮಂದಿ ತಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ. ದೇವರು ಇರುವುದನ್ನು ನಂಬುತ್ತೇವೆ ಎಂದು ಹೇಳಿದರೆ, ಶೇ. 18ರಷ್ಟು ಮಂದಿ ತಾಮಗೆ ದೇವರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ಇನ್ನೂ ವಿದ್ಯಾರ್ಥಿಗಳು ಹೆಚ್ಚಿನ ವೇಳೆ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿದ್ದಾರೆ, ಶೇ 32 ರಷ್ಟು ವಿದ್ಯಾರ್ಥಿಗಳು ತಮ್ಮ ಪದವಿ ನಂತರ ವಾರ್ಷಿಕವಾಗಿ 10-15 ಲಕ್ಷ ಸಂಬಳ ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.