ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಿ ಎ ಪ್ರಮಾಣಪತ್ರವನ್ನು ಸಾರ್ವಜನಿಕರಿಗೆ ತೆರೆದಿಡುವಂತೆ ದೆಹಲಿ ವಿಶ್ವವಿದ್ಯಾಲಯಕ್ಕೆ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಉಪಕುಲಪತಿ ಯೋಗೇಶ್ ತ್ಯಾಗಿ ಅವರಿಗೆ ಬರೆದಿರುವ ಪತ್ರದಲ್ಲಿ ಮೋದಿ ಅವರು ವಿವಿಧ ಚುನಾವಣೆಗಳಲ್ಲಿ, ದೆಹಲಿ ವಿಶವಿದ್ಯಾಲಯದಿಂದ ಬಿ ಎ ಪಾಸು ಮಾಡಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದಿರುವ ಕೇಜ್ರಿವಾಲ್ "ಪ್ರಧಾನಿ ಅವರ ಪದವಿಯ ಬಗೆಗಿನ ದಾಖಲೆಗಳನ್ನು ವಿಶ್ವವಿದ್ಯಾಲಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ" ಎಂದು ಆಗ್ರಹಿಸಿದ್ದಾರೆ.
"ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿಯುವ ಹಕ್ಕು ಈ ದೇಶದ ಜನತೆಗಿದೆ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ.