ನರೇಂದ್ರ ಮೋದಿ (ಕೃಪೆ: ಪಿಟಿಐ)
ಕಾಸರಗೋಡು: ಕೇರಳದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಹೊಂದಾಣಿಕೆಯ ರಾಜಕೀಯ ನಡೆಯುತ್ತಿದೆ. ಇಲ್ಲಿನ ವಿದ್ಯಾವಂತ ಮತದಾರರನ್ನು ಈ ಎರಡೂ ಪಕ್ಷ
ಗಳು ಅವಮಾನ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕಾಸರಗೋಡಿನ ವಿದ್ಯಾನಗರ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರವರು.
ಕೇರಳದಲ್ಲಿ ಹೊಸ ರೀತಿಯ ರಾಜಕೀಯ ನಡೆದುಬರುತ್ತಿದೆ. ಇದು ಹೊಂದಾಣಿಕೆಯ ರಾಜಕೀಯ, ಭ್ರಷ್ಟಾಚಾರದ ರಾಜಕೀಯ ಮತ್ತು ಪರಸ್ಪರ ಒಬ್ಬರನ್ನೊಬ್ಬರು ಉಳಿಸಿಕೊಳ್ಳಲಿರುವ ಒಪ್ಪಂದದ ರಾಜಕೀಯ ಎಂದು ಮೋದಿ ಹೇಳಿದ್ದಾರೆ.
ಕೇರಳದಲ್ಲಿರುವುದು ಎಲ್‌ಡಿಎಫ್ ಮತ್ತು ಯುಡಿಫ್ ನಡುವಿನ ಕರಾರು ಆಡಳಿತ. ಮೊದಲಿನ ಐದು ವರ್ಷ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ನಂತರದ ಐದು ವರ್ಷ ಇನ್ನೊಂದು ಪಕ್ಷ ಆಡಳಿತ ನಡೆಸುತ್ತದೆ. ಹೀಗೆ ಎರಡು ಪಕ್ಷಗಳು ಒಮ್ಮೆ ನಾನು, ಮತ್ತೊಮ್ಮೆ ನೀನು ಎಂಬಂತೆ ಅಧಿಕಾರ ಚಲಾಯಿಸುತ್ತಿವೆ ಎಂದಿದ್ದಾರೆ.
ಕೇರಳದಲ್ಲಿ ಮೇ 16 ಕ್ಕೆ ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು, ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಮೋದಿ ಟೀಕಾ ಪ್ರಹಾರ ಮಾಡಿದ್ದಾರೆ. ಸಿಪಿಐ (ಎಂ) ಇಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಕೆಲವು ವರ್ಷಗಳ ಹಿಂದೆ ತಲಶ್ಶೇರಿಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈದ ಪ್ರಕರಣದಲ್ಲಿ ಮಾರ್ಕ್ಸಿಸ್ಟ್ ಪಕ್ಷದ ಮುಖ್ಯಮಂತ್ರಿ ಆಕಾಂಕ್ಷಿಯ ಹೆಸರು ಕೇಳಿ ಬಂದಿತ್ತು.
ಕೇರಳದ ಕಾಂಗ್ರೆಸ್ ನಾಯಕರು ಸಿಪಿಎಂ ಮಾಡುತ್ತಿರುವ ಕ್ರೌರ್ಯಗಳ ಬಗ್ಗೆ ಹೇಳುತ್ತಾರೆ. ಆದರೆ ಪಶ್ಚಿಮ ಬಂಗಾಳಕ್ಕೆ ಹೋದರೆ ಅಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಮಾತ್ರ ಬಂಗಾಳವನ್ನು ರಕ್ಷಿಸಲು ಸಾಧ್ಯ ಎಂದು ಹೇಳುತ್ತಾರೆ. ಹೀಗಿರುವಾಗ ಎರಡು ಪ್ರದೇಶಗಳಲ್ಲಿ ಎರಡು ರೀತಿಯ ವರ್ತನೆ ಮಾಡುವ ಪಕ್ಷಗಳನ್ನು ನೀವು ನಂಬುತ್ತೀರೋ ಎಂದು ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ.
ಕೇರಳದಲ್ಲಿ ಯಾರು ಅಧಿಕಾರಕ್ಕೇರುತ್ತಾರೆ ಎಂಬುದು ಈ ಚುನಾವಣೆಯಲ್ಲಿ ಮುಖ್ಯವಲ್ಲ. ಕೇರಳವನ್ನು ಯಾರು ರಕ್ಷಿಸುತ್ತಾರೆ ಮತ್ತು ಕೇರಳದ ಯುವ ಜನಾಂಗಕ್ಕೆ ಯಾರು ಉದ್ಯೋಗ ನೀಡುತ್ತಾರೆ, ಯಾರು ಅವರ ಭವಿಷ್ಯವನ್ನು ಭದ್ರ ಪಡಿಸುತ್ತಾರೆ ಎಂಬುದು ಮುಖ್ಯ.
ಕೇರಳವನ್ನು ದೇವರ ಸ್ವಂತ ನಾಡು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಮುಗ್ಧ ಜನರನ್ನು ಹತ್ಯೆಗೈಯ್ಯಲಾಗುತ್ತಿದ್ದು ಈ ಬಗ್ಗೆ ದೇಶದ ಜನರಿಗೆ ಗೊತ್ತಿಲ್ಲ ಎಂಬುದನ್ನು ನಾನು ದೆಹಲಿಯ ಮಾಧ್ಯಮದವರಿಗೆ ಹೇಳಲು ಬಯಸುತ್ತೇನೆ. ಅದೇ ವೇಳೆ ಸಿಪಿಎಂನ ಕ್ರೌರ್ಯಕ್ಕೊಳಗಾಗಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಸದಾನಂದ ಮಾಸ್ಟರ್ ಅವರಿಗೆ ಸಹಾಯಹಸ್ತ ನೀಡಲು ಪ್ರಧಾನಿ ಯೋಜನೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos