ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಎಂ ವೆಂಕಯ್ಯ ನಾಯ್ಡು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಗುರಿ ನಗದುರಹಿತ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಯಾವುದೇ ಕಾರಣಕ್ಕೂ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆತ ನಿರ್ಧಾರವನ್ನು ವಾಪಸ್ ಪಡೆಯುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
"ಸರ್ಕಾರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬದ್ಧವಾಗಿದೆ. ಕಪ್ಪು ಹಣವನ್ನು ಮುಚ್ಚಿಟ್ಟುವವರ ವಿರುದ್ಧ ಕೂಡ ಈ ಹೋರಾಟ. ಅವರು ತಮ್ಮ ಆಸ್ತಿಪಾಸ್ತಿಯನ್ನು ಘೋಷಿಸಿ ತೆರಿಗೆ ಕಟ್ಟಲು ಮೋದಿ ಅವಕಾಶ ನೀಡಿದ್ದರು, ಆದರೆ ಕೆಲವರು ಮಾಡಲಿಲ್ಲ. ಅವರ ವಿರುದ್ಧ ಈ ಹೋರಾಟ ಮುಂದುವರೆಯುತ್ತದೆ" ಎಂದು ನಾಯ್ಡು ರ್ಯಾಲಿಯಲ್ಲಿ ಹೇಳಿದ್ದಾರೆ.
"ವಿದೇಶಗಳಿಂದ ಕಪ್ಪು ಹಣ ಹಿಂದಕ್ಕೆ ತರಲು ಮೋದಿ ಮೊದಲು ಪ್ರಯತ್ನಿಸಿದ್ದರು, ಈಗ ದೇಶದಲ್ಲಿರುವ ಕಪ್ಪು ಹಣವನ್ನು ಹೊರಗೆಡವಲು ಪ್ರಯತ್ನಿಸುತ್ತಿದ್ದಾರೆ" ಎಂದು ನಾಯ್ಡು ಹೇಳಿದ್ದಾರೆ.
"ನೀವು ಯಾವುದೇ ವ್ಯಕ್ತಿಗೆ ನಗದು ಮೂಲಕ ವ್ಯವಹಾರ ನಡೆಸಲು ಬಾರದ, ನಗದು ರಹಿತ ಆರ್ಥಿಕ ವ್ಯವಸ್ಥೆ ಪ್ರಧಾನಿಯವರ ಗುರಿ" ಎಂದು ಕೂಡ ನಾಯ್ಡು ಹೇಳಿದ್ದಾರೆ.
ಹಾಗೆಯೇ ಜೆ ಎ ಎಂ (ಜನ್ ಧನ್, ಆಧಾರ್ ಮತ್ತು ಮೊಬೈಲ್) ಶೀಘ್ರದಲ್ಲೇ ತರುವುದು ಕೂಡ ಪ್ರಧಾನಿ ಅವರ ಗುರಿ ಎಂದಿರುವ ನಾಯ್ಡು "ವಿಪಕ್ಷಗಳು ಒಗ್ಗೂಡುತ್ತಿರುವ ರೀತಿ ಅಚ್ಚರಿ ತರಿಸಿದೆ. ಆದರೆ ಅವರ ಶಕ್ತಿ ಏನು? ಇಡೀ ದೇಶ ನಮ್ಮ ಜೊತೆಗಿದೆ" ಎಂದು ಕೂಡ ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
"ಈ ನಿರ್ಧಾರವನ್ನು ಹಿಂಪಡೆಯದಂತಹ ರೀತಿಯ ವ್ಯಕ್ತಿ ಮೋದಿ" ಎಂದು ನಾಯ್ಡು ಹೇಳಿದ್ದಾರೆ.