ಭುಜ್: ಪಾಕಿಸ್ತಾನದ ಸಮುದ್ರ ಗಡಿಯಲ್ಲಿರುವ ಗುಜರಾತಿನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದಲ್ಲಿ 9 ಜನರನ್ನು ಹೊತ್ತಿದ್ದ ಪಾಕಿಸ್ತಾನ ಹಡಗನ್ನು ಬೇಧಿಸಿ ಭಾರತೀಯ ಗಡಿರಕ್ಷಣಾ ಪಡೆ (ಬಿ ಎಸ್ ಎಫ್) ಬುಧವಾರ ವಶಕ್ಕೆ ಪಡೆದಿದೆ.
"ಸರ್ ಕ್ರೀಕ್ ಪ್ರದೇಶದ ಬಳಿ, ಗಸ್ತು ಸುತ್ತುವಾಗ ನಮ್ಮ ತಂಡ 8 ರಿಂದ 9 ಜನನ್ನು ಹೊತ್ತ ಹಡಗನ್ನು ವಶಪಡಿಸಿಕೊಂಡಿದೆ.
"ಅವರನ್ನು ಆಳವಾಗಿ ವಿಚಾರಣೆಗೆ ಒಳಪಡಿಸಲು ತನಿಖಾ ದಳಗಳನ್ನು ಕಳುಹಿಸಲಾಗಿದೆ. ನಾವು ಸದ್ಯಕ್ಕೆ ಮೀನುಗಳು ಮತ್ತು ಮೀನು ಹಿಡಿಯುವ ಸಾಧನಗಳನ್ನಷ್ಟೇ ಹಡಗಿನಿಂದ ವಶಪಡಿಸಿಕೊಂಡಿದ್ದೇವೆ" ಎಂದು ಹಿರಿಯ ಬಿ ಎಸ್ ಎಫ್ ಅಧಿಕಾರಿ ಹೇಳಿದ್ದಾರೆ.
"ಆದರೆ ಈ ಜನ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿರವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ" ಎಂದು ಕೂಡ ಅಧಿಕಾರಿ ಹೇಳಿದ್ದಾರೆ.
ಗುಜರಾತಿನ ಪೋರಬಂದರಿನ ಬಳಿ ಕೂಡ ಅಕ್ಟೋಬರ್ 2 ರಂದು ಪಾಕಿಸ್ತಾನಿ ಹಡಗನ್ನು ಭಾರತೀಯ ಪಡೆಗಳು ವಶಪಡಿಸಿಕೊಂಡಿದ್ದವು.