ಪ್ರಧಾನ ಸುದ್ದಿ

ಬಿಹಾರದಲ್ಲಿ ಐದು ಜನ ಶಂಕಿತ ಉಗ್ರರನ್ನು ಬಂಧಿಸಿದ ಎನ್ ಐ ಎ

Guruprasad Narayana
ಪಾಟ್ನಾ: ಇಬ್ಬರು ಪಾಕಿಸ್ತಾನಿಯರನ್ನು ಸೇರಿದಂತೆ, ಭಾರತ-ನೇಪಾಳದ ಬಿಹಾರದ ರಾಕ್ಸುಲ್ ಗಡಿಯಲ್ಲಿ ಐದು ಜನ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಬಂಧಿಸಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ. 
"ಈ ಶಂಕಿತ ಉಗ್ರರಿಂದ ಪಾಟ್ನಾದ ಪ್ರಮುಖ ಪ್ರದೇಶಗಳ ಭೂಪಟಗಳನ್ನು ಎನ್ ಐ ಎ ವಶಪಡಿಸಿಕೊಂಡಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಅವರ ಯೋಜನೆಗಳ ಬಗ್ಗೆ ಎನ್ ಐ ಎ ಮತ್ತು ಬೇಹುಗಾರಿಕಾ ದಳ (ಐಬಿ) ತಂಡ ಹೆಚ್ಚಿನ ತನಿಖೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ. 
ಆಗಸ್ಟ್ 2013 ರಲ್ಲಿ, ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಅಧ್ಯಕ್ಷ ಯಾಸಿನ್ ಭಟ್ಕಳ್ ನನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಾಕ್ಸುಲ್ ನಲ್ಲಿ ಬಂಧಿಸಲಾಗಿತ್ತು. 
SCROLL FOR NEXT