ಬೆಂಗಳೂರು: ಬೆಂಗಳೂರಿನಲ್ಲಿದ್ದ ಹೈದರಾಬಾದ್ ಮೂಲದ ಟೆಕ್ಕಿ ಆದಿತ್ಯ ಶ್ರೀವಾತ್ಸವ್ ಅವರು ಕಳೆದ ಸೋಮವಾರ ಮಧ್ಯರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
31 ವರ್ಷದ ಶ್ರೀವಾತ್ಸವ್ ಅವರು ವ್ಯವಹಾರಿಕ ಸಭೆಯೊಂದರಲ್ಲಿ ಭಾಗವಹಿಸಲು ಮೂರು-ನಾಲ್ಕು ದಿನಗಳ ಮಟ್ಟಿಗೆ ಬೆಂಗಳೂರಿಗೆ ಆಗಮಿಸಿದ್ದರು.
ಆದಿತ್ಯ ಶ್ರೀವಾತ್ಸವ್ ಅವರನ್ನು ಕೊನೆಯ ಬಾರಿ ಸಂಪರ್ಕಿಸಿದ ಅಂತರ ಚಟರ್ಜಿ ಅವರ ಪ್ರಕಾರ, ಸೋಮವಾರ ರಾತ್ರಿ 9.30ರ ಸುಮಾರಿಗೆ ಹೈದರಾಬಾದ್ ಬಸ್ ಹತ್ತುವ ಮುನ್ನ ಆಧಿತ್ಯ ನನಗೆ ಕಾಲ್ ಮಾಡಿದ್ದ ಮತ್ತು 9.12ರ ಸುಮಾರಿಗೆ ತನ್ನ ಭಾವಿ ಪತ್ನಿ ಕೃತಿಕಾ ಸಕ್ಸೆನಾಗೆ ವಿಮಾನ ನಿಲ್ದಾಣದಲ್ಲಿ ಭೇಟಿಯಾಗುವುದಾಗಿ ಕೊನೆ ಬಾರಿ ಟೆಕ್ಸಟ್ ಮಾಡಿದ್ದ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಗ್ಗಲಿಪುರ ಪೊಲೀಸರು, ನಾಪತ್ತೆ ಪ್ರಕರಣ ದಾಖಲಾಗಿದೆ. ಆದಿತ್ಯ ಅವರ ಫೋನ್ ಟ್ರ್ಯಾಕ್ ಮಾಡಲು ಯತ್ನಿಸುತ್ತಿದ್ದೇವೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics