ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮೈಸೂರಿಂದ ಚೆನ್ನೈಗೆ ಸೆಮಿ ಹೈಸ್ಪೀಡ್ ರೈಲು, 4 ಗಂಟೆ, 45 ನಿಮಿಷ ಪ್ರಯಾಣ ಅಷ್ಟೇ

ಇನ್ನುಮುಂದೆ ನೀವು ಮೈಸೂರಿನಿಂದ ಚೆನ್ನೈಗೆ ಕೇವಲ 4 ಗಂಟೆ, 45 ನಿಮಿಷಗಳಲ್ಲೇ ಹೋಗಬಹುದು.

ನವದೆಹಲಿ: ಇನ್ನುಮುಂದೆ ನೀವು ಮೈಸೂರಿನಿಂದ ಚೆನ್ನೈಗೆ ಕೇವಲ 4 ಗಂಟೆ, 45 ನಿಮಿಷಗಳಲ್ಲೇ ಹೋಗಬಹುದು.

ಹೌದು. ಮೈಸೂರು, ಬೆಂಗಳೂರು - ಚೆನ್ನೈ ಮಧ್ಯ 160 ಕಿ.ಮೀ ವೇಗದ ಸೆಮಿ ಹೈಸ್ಪೀಡ್ ರೈಲು ಯೋಜನೆ ಸಿದ್ಧವಾಗಿದ್ದು, ಇದಕ್ಕಾಗಿ 4,350 ಕೋಟಿ ರುಪಾಯಿ ವೆಚ್ಚ ಮಾಡಬೇಕಾಗದ ಅಗತ್ಯವಿದೆ.

ಈ ಸಂಬಂಧ ಚೀನಾ ಕಂಪನಿಯೊಂದು ಕಳೆದ ವಾರ ರೈಲ್ವೆ ಮಂಡಳಿಗೆ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಸಿದ್ದು, ಮೈಸೂರಿನಿಂದ ಚೆನ್ನೈಗೆ 500 ಕಿ.ಮೀ.ದೂರವನ್ನು ಕ್ರಮಿಸಲು ಕೇವಲ 4ಗಂಟೆ 45 ನಿಮಿಷ ಸಾಕು ಎಂದು ಹೇಳಿದೆ. ಪ್ರಸ್ತೂತ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಶತಾಬ್ದಿ ಎಕ್ಸ್ ಪ್ರೆಸ್ 7ಗಂಟೆ ತೆಗೆದುಕೊಳ್ಳುತ್ತಿದೆ.

ಮೈಸೂರಿನಿಂದ ಚೆನ್ನೈ ನಡುವಿನ ಸಂಪೂರ್ಣ ಮಾರ್ಗವನ್ನು ಮೇಲ್ದರ್ಜೆಗೇರಿಸಲು 4,350 ಕೋಟಿ ರುಪಾಯಿ ವೆಚ್ಚವಾಗುತ್ತದೆ ಮತ್ತು ಬೆಂಗಳೂರಿನಿಂದ ಚೆನ್ನೈಗೆ 3200 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಒಂದು ವೇಳೆ ಬೆಂಗಳೂರಿನಿಂದ ಚೆನ್ನೈ ನಡುವಿನ ಮಾರ್ಗವನ್ನು ಮಾತ್ರ ಮೇಲ್ದರ್ಜೆಗೇರಿಸಿದರೆ ಈ ನಗರಗಳ ಮಧ್ಯ ಕೇವಲ 2ಗಂಟೆ 50 ನಿಮಿಷದಲ್ಲಿ ರೈಲು ಸಂಚರಿಸಲಿದೆ ಎಂದು ವರದಿ ವಿವರಿಸಿದೆ.

ಮೈಸೂರು-ಬೆಂಗಳೂರು ಮಧ್ಯದ ಮಾರ್ಗದಲ್ಲಿ ಅತಿ ಹೆಚ್ಚು ಗುಡ್ಡಗಳಿರುವುದರಿಂದ ಇದು ತುಂಬಾ ಕಠಿಣ ಕಾರ್ಯವಾಗಿದೆ. ಬೆಂಗಳೂರು-ಮೈಸೂರು ಮಧ್ಯಯೇ ಅತಿ ಹೆಚ್ಚು ಬದಲಾವಣೆ ಮಾಡಬೇಕಾದ ಅಗತ್ಯ ಇದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ಈ ಯೋಜನೆ ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು-ಚೈನ್ನೈ ಹಾಗೂ ಎರಡನೇ ಹಂತದಲ್ಲಿ ಬೆಂಗಳೂರು - ಮೈಸೂರು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಚೀನಾ ಕಂಪನಿ ಸಲ್ಲಿಸಿರುವ ವರದಿಯಲ್ಲಿ ರೈಲ್ವೆ ಮಂಡಳಿ ಹಲವು ಬದಲಾವಣೆಯನ್ನು ಮಾಡಿದ್ದು, ಅಂತಿಮ ವರದಿಯಲ್ಲಿ ಅವುಗಳನ್ನು ಸರಿಪಡಿಸುವಂತೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!