ಜಿಯೊ ಜಾಹೀರಾತಿನಲ್ಲಿ ಮೋದಿ 
ಪ್ರಧಾನ ಸುದ್ದಿ

ಜಿಯೊ ಜಾಹೀರಾತಿನಲ್ಲಿ ಪ್ರಧಾನಿ; ರಿಲಯನ್ಸ್‌ ಗಾಗಿ ಮಾಡಲಿಂಗ್ ಮಾಡ್ಕೊಂಡಿರಿ: ಮೋದಿಗೆ ಕೆಜ್ರಿವಾಲ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿಸ್ಟರ್ ರಿಲಯನ್ಸ್‌ ಎಂದು ವ್ಯಂಗ್ಯವಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿಸ್ಟರ್ ರಿಲಯನ್ಸ್‌ ಎಂದು ವ್ಯಂಗ್ಯವಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಿಲಯನ್ಸ್‌ ಗಾಗಿ ಮಾಡಲಿಂಗ್ ಮಾಡ್ಕೊಂಡಿರಿ ಎಂದು ಪ್ರಧಾನಿಗೆ ಶುಕ್ರವಾರ ಸಲಹೆ ನೀಡಿದ್ದಾರೆ.
ಕಡಿಮೆ ದರಕ್ಕೆ ಡೇಟಾ ಮತ್ತು ಕರೆ, ರೋಮಿಂಗ್‌ ಉಚಿತ ಎಂಬ ಘೋಷಣೆಯಿಂದ ಟೆಲಿಕಾಂ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿರುವ ರಿಲಯನ್ಸ್‌ನ ಜಿಯೊ ಮೊಬೈಲ್‌ ಜಾಹೀರಾತಿನಲ್ಲಿ ಮೋದಿ ಅವರ ಫೋಟೋ ಕಾಣಿಸಿಕೊಂಡ ನಂತರ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಸಿಎಂ, ಮೋದಿಜಿ ನೀವು ರಿಲಯನ್ಸ್ ಜಾಹೀರಾತಿಗಾಗಿ ಮಾಡಲಿಂಗ್ ಮಾಡ್ಕೊಂಡಿರಿ. 2019ರಲ್ಲಿ ಜನ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಮುಖಪುಟ ಜಾಹೀರಾತಿನ ಚಿತ್ರದೊಂದಿಗೆ ಟ್ವೀಟ್‌ ಮಾಡಿರುವ ಅರವಿಂದ ಕೇಜ್ರಿವಾಲ್‌, ‘ಮೋದಿ ಅವರು ಅಂಬಾನಿ ಜೇಬಿನಲ್ಲಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ’ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೊಡ್ಡ ಭಾವವಿತ್ರವಿರುವ ‘ಜಿಯೊ: ಡಿಜಿಟಲ್‌ ಲೈಫ್‌’ ಜಾಹೀರಾತು ‘ಟೈಮ್ಸ್‌ ಆಫ್‌ ಇಂಡಿಯಾ’, ‘ಹಿಂದೂಸ್ತಾನ್‌ ಟೈಮ್ಸ್‌’ ಸೇರಿದಂತೆ ದೇಶದ ಕೆಲ ದಿನ ಪತ್ರಿಕೆಗಳ ಮುಖಪುಟದಲ್ಲಿ ಶುಕ್ರವಾರ ಪ್ರಕಟವಾಗಿದೆ.
ಖಾಸಗಿ ಕಂಪೆನಿಯೊಂದರ ಜಾಹೀರಾತಿನಲ್ಲಿ ಪ್ರಧಾನಮಂತ್ರಿಯವರ ಚಿತ್ರ ಬಳಕೆಯಾಗಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಜಾಹೀರಾತು ಉದ್ದೇಶಕ್ಕೆ ಪ್ರಧಾನಮಂತ್ರಿಯವರ ಚಿತ್ರ ಬಳಕೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಜಿಯೊ ಜಾಹೀರಾತಿನಲ್ಲಿ ಮೋದಿ ಅವರ ಭಾವಚಿತ್ರ ಬಳಕೆಯಾಗಿರುವುದರಿಂದ ‘ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆ 1950’ (The Emblems And Names (Preventation Of Improper Use) Act, 1950) ಉಲ್ಲಂಘನೆಯಾಗಿದೆ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!