ಪ್ರಧಾನ ಸುದ್ದಿ

ವಿಯೆಟ್ನಾಂನಲ್ಲಿ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

Vishwanath S
ವಿಯೆಟ್ನಾಂ: ವಿಯೆಟ್ನಾಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಟ್ರಾನ್ ದೈ ಕ್ವಾಂಗ್ ಅವರು ಸಾಂಪ್ರದಾಯಿಕ ಸ್ವಾಗತ ಕೋರಿದರು. 
ಸೆಪ್ಟೆಂಬರ್ 4ರಂದು ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣ ಬೆಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಗಮಧ್ಯೆ ವಿಯೆಟ್ನಾಂಗೆ ಭೇಟಿ ನೀಡಿದರು. 
ವಿಯೆಟ್ನಾಂ ಜತೆ ಸ್ನೇಹ ಬೆಸೆಯುವುದು ಹಾಗೂ ವಿಯೆಟ್ನಾಂ ಜತೆಗಿನ ಹೊಸ ಬಾಂಧವ್ಯದ ಸಂದೇಶವನ್ನು ಹೊತ್ತು ಚೀನಾಗೆ ತೆರಳುವ ಮೂಲಕ ಚೀನಾಗೆ ಒಂದು ಕಟು ಸಂದೇಶವನ್ನು ರವಾನಿಸುವುದು ಪ್ರಧಾನಿ ಮೋದಿ ಅವರು ತಂತ್ರಗಾರಿಕೆಯಾಗಿದೆ. 
2001ರಲ್ಲಿ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ವಿಯೆಟ್ನಾಂಗೆ ಭೇಡಿ ನೀಡಿದ್ದರು. ಇದಾದ ಬಳಿಕ ಅಂದರೆ 15 ವರ್ಷಗಳ ನಂತರ ಮೋದಿ ಈಗ ವಿಯೆಟ್ನಾಂಗೆ ತೆರಳಿರುವುದು ಹೊಸ ಭಾಷ್ಯ ಬರೆಯಲಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ಹತ್ತಿಕ್ಕುವ ನಿಟ್ಟಿನಲ್ಲಿ ಅಗತ್ಯ ವಾದ ಎಲ್ಲ ರಾಷ್ಟ್ರಗಳ ಬೆಂಬಲ ಪಡೆಯುವುದು ಪ್ರಧಾನಿ ಮೋದಿ ಅವರ ಕಾರ್ಯತಂತ್ರವಾಗಿದೆ. ಈಗಾಗಲೇ ಪರಸ್ಪರ ಸೇನಾ ನೆಲೆ ಬಳಕೆಗೆ ಅವಕಾಶ ಮಾಡಿಕೊಡುವ ಒಡಂಬಡಿಕೆಗೆ ಅಮೆರಿಕದೊಂದಿಗೆ ಸಹಿ ಹಾಕುವ ಮೂಲಕ ಭಾರತ ತನ್ನ ಶಕ್ತಿ, ಸಾಮರ್ಥ್ಯ, ತಂತ್ರಗಾರಿಕೆಯನ್ನು ಚೀನಾಗೆ ಮನವರಿಕೆ ಮಾಡಿಕೊಟ್ಟಿದೆ. 
ವಿಯೆಟ್ನಾಂ ಸ್ನೇಹದಿಂದಾಗುವ ಲಾಭ?
ದಕ್ಷಿಣ ಚೀನಾ ಕರಾವಳಿಯಲ್ಲಿ ನಿಯಂತ್ರಣ ಸಾಧಿಸಲು ಚೀನಾ ವಿರೋಧಿಗಳ ಸಹಕಾರ ಅನಿವಾರ್ಯ. ಚೀನಾ ಶತ್ರು ರಾಷ್ಟ್ರಗಳ ಬಾಂಧವ್ಯ ಹೆಚ್ಚಾದಂತೆ ಬಾರತದ ವಿಚಾರದಲ್ಲಿ ಚೀನಾವನ್ನು ಮೆದುವಾಗಿಸಬಹುದು. ಮಿಲಿಟರಿ ನೆರವು ಘೋಷಿಸುವ ಮೂಲಕ ಚೀನಾದ ಭದ್ರತೆಗೆ ಸವಾಲಾಗಿ ರಾಷ್ಟ್ರವನ್ನು ಬಲಪಡಿಸುವುದು. ತೈಲ ಉತ್ಪಾದಿಸುವ ವಿಯೆಟ್ನಾಂನಿಂದ ಕಚ್ಚಾತೈಲ ಉತ್ಪನ್ನಗಳ ಆಮದು ಲಾಭವಾಗಬಹುದು. 
SCROLL FOR NEXT