ಪ್ರಧಾನ ಸುದ್ದಿ

ಜಯಲಲಿತಾ ಸರ್ಕಾರದಿಂದ 'ಅಮ್ಮಾ ಮ್ಯಾರೇಜ್ ಹಾಲ್' ನಿರ್ಮಾಣ

Lingaraj Badiger
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಶನಿವಾರ ಅಮ್ಮಾ ಬ್ರಾಂಡ್ ನಡಿ ಮತ್ತೊಂದು ಜನಪ್ರಿಯ ಯೋಜನೆ ಘೋಷಿಸಿದ್ದು, ಅಮ್ಮಾ ಕ್ಯಾಂಟೀನ್, ಅಮ್ಮಾ ಸಿಮೆಂಟ್, ಅಮ್ಮಾ ಜಿಮ್, ಅಮ್ಮಾ ಪಾರ್ಕ್, ಅಮ್ಮಾ ಬೇಬಿ ಕಿಟ್ ನಂತರ ಈಗ ಬಡವರಿಗಾಗಿ ಅಮ್ಮಾ ಮ್ಯಾರೇಜ್ ಹಾಲ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಅಂದಾಜು 83 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ 11 ಸ್ಥಳಗಳಲ್ಲಿ ಅಮ್ಮಾ ಮ್ಯಾರೇಜ್ ಹಾಲ್ ನಿರ್ಮಾಣ ಮಾಡುವುದಾಗಿ ಜಯಲಲಿತಾ ಪ್ರಕಟಣೆಯಲ್ಲಿ ತಿಳಿಸಿದ್ದು, ಮದುವೆ ಸಮಾರಂಭಕ್ಕಾಗಿ ಹಾಲ್ ಅನ್ನು ಆನ್ ಲೈನ್ ಮೂಲಕವೂ ಬುಕಿಂಗ್ ಮಾಡಬಹುದಾಗಿದೆ.
ಮದುವೆ ಸಮಾರಂಭಕ್ಕಾಗಿ ಮ್ಯಾರೇಜ್ ಹಾಲ್ ಗಳಿಗೆ ಬಡವರು ಅತಿ ಹೆಚ್ಚು ಹಣ ಖರ್ಚು ಮಾಡಬೇಕಾಗಿದ್ದು, ಬಡವರ ಅನುಕೂಲಕ್ಕಾಗಿ ಅಮ್ಮಾ ಮದುವೆ ಸಭಾಂಗಣ ನಿರ್ಮಾಣ ಮಾಡುವಂತೆ ತಾವು ಆದೇಶ ನೀಡಿರುವುದಾಗಿ ಜಯಲಲಿತಾ ತಿಳಿಸಿದ್ದಾರೆ. 
ಮ್ಯಾರೇಜ್ ಹಾಲ್ ನಲ್ಲಿ ವರ, ವಧುವಿನ ರೂಂಗಳು ಹವಾನಿಯಂತ್ರಣದ ವ್ಯವಸ್ಥೆಯನ್ನು ಹೊಂದಿರಲಿದೆ. ಅಲ್ಲದೇ ಅತಿಥಿಗಳ ಕೋಣೆಗಳು, ಊಟದ ಹಾಲ್ ಮತ್ತು ಕಿಚನ್ ಕೂಡಾ ಇರಲಿದೆ.
ಅಮ್ಮಾ ಮ್ಯಾರೇಜ್ ಹಾಲ್ ನಿರ್ಮಾಣಕ್ಕಾಗಿ ತಮಿಳುನಾಡು ಹೌಸಿಂಗ್ ಬೋರ್ಡ್ ಮತ್ತು ಕೋ ಆಪರೇಟಿವ್ ಸೊಸೈಟಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.
ತಮಿಳುನಾಡಿನ ತೊಂಡಿಯಾರ್ ಪೇಟ್, ವೆಲಾಚೇರಿ, ಆಯಾಪಾಕ್ಕಂ, ಪೆರಿಯಾರ್ ನಗರ್, ಚೆನ್ನೈನ ಕೊರಟ್ಟೂರು, ಮದುರೈಯ ಅಣ್ಣಾನಗರ್, ತಿರುನೆಲ್ವೇಲಿಯ ಅಂಬಾಸಮುದ್ರಂ, ಸೇಲಂನ ಸೇಲಂ, ತಿರುವಳ್ಳೂರ್ ನ ಕೊಡುಂಗೈಯೂರ್, ತಿರುಪುರ್ ನ ಉದುಮಲೈಪೇಟ್ ನಲ್ಲಿ ಮದುವೆ ಸಭಾಂಗಣ ನಿರ್ಮಾಣವಾಗಲಿವೆ.
SCROLL FOR NEXT