ಪ್ರಧಾನ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಕ್ಷಯ್ ಅತ್ಯುತ್ತಮ ನಟ; ರಿಸರ್ವೇಷನ್ ಅತ್ಯುತ್ತಮ ಕನ್ನಡ ಚಿತ್ರ

Vishwanath S
ನವದೆಹಲಿ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ರುಸ್ತುಮ್ ಚಿತ್ರದ ಅಭಿನಯಕ್ಕಾಗಿ ನಟ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರೆ, ಮಲಯಾಳಂ ನಟಿ ಸುರಭಿ ಲಕ್ಷ್ಮಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 
ಕನ್ನಡದ ರಿಸರ್ವೇಷನ್ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದ್ದರೆ, ಅಲ್ಲಮ ಚಿತ್ರದ ಸಂಗೀತಕ್ಕಾಗಿ ಬಾಪು ಪದ್ಮನಾಭ ಅತ್ಯುತ್ತಮ ಸಂಗೀತ ಮತ್ತು ಮೇಕಪ್ ವಿಭಾಗದಲ್ಲಿ ಎನ್ ಕೆ ರಾಮಕೃಷ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇನ್ನು ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ರೈಲ್ವೆ ಚಿಲ್ಡ್ರನ್ ಚಿತ್ರದ ಅಭಿನಯಕ್ಕಾಗಿ ಕನ್ನಡದ ಮನೋಹರ್ ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 
ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:
ಅತ್ಯುತ್ತಮ ನಟ - ಅಕ್ಷಯ್ ಕುಮಾರ್ 
ಅತ್ಯುತ್ತಮ ನಟಿ - ಸುರಭಿ ಲಕ್ಷ್ಮಿ 
ಅತ್ಯುತ್ತಮ ಚಿತ್ರ- ನೀರ್ಜಾ
ಅತ್ಯುತ್ತಮ ಕನ್ನಡ ಚಿತ್ರ- ರಿಸರ್ವೇಷನ್
ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ - ಪಿಂಕ್
ಅತ್ಯುತ್ತಮ ನಿರ್ದೇಶಕ - ರಾಜೇಶ್ ಮಪುಸ್ಕರ್
ಅತ್ಯುತ್ತಮ ಸಾಹನ ನಿರ್ದೇಶಕ -ಪೀಟರ್ ಹಯೇನ್
ಅತ್ಯುತ್ತಮ ಹಿನ್ನೆಲೆ ಗಾಯಕ - ಸುಂದರ್ ಅಯ್ಯರ್, ತಮಿಳಿನ ಜೋಕರ್ ಚಿತ್ರ
ಅತ್ಯುತ್ತಮ ಹಿನ್ನೆಲೆ ಗಾಯಕಿ - ಇಮಾನ್ ಚಕ್ರವರ್ತಿ 
ಅತ್ಯುತ್ತಮ ಪೋಷಕ ನಟಿ - ಝೈರಾ, ದಂಗಲ್ ಚಿತ್ರ
ಅತ್ಯುತ್ತಮ ಸಂಕಲನಕಾರ - ಮರಾಠಿಯ ವೆಂಟಿಲೆಟರ್
ಅತ್ಯುತ್ತಮ ಸಂಗೀತ ನಿರ್ದೇಶನ , ಹಿನ್ನೆಲೆ ಸಂಗೀತ - ವೆಂಟಿಲೆಟರ್
ಅತ್ಯುತ್ತಮ ವಸ್ತ್ರಾಲಂಕಾರ ಮತ್ತು ಪ್ರಸಾಧನ ಕಲಾವಿದ- ಮರಾಠಿಯ ಸೈಕಲ್ ಚಿತ್ರ
ಉತ್ತಮ ಮಕ್ಕಳ ಚಲನಚಿತ್ರ - ಧನಕ್
ಪರಿಸರ ಸಂರಕ್ಷಣೆ ಮತ್ತು ಕಾಳಜಿ ಪ್ರಶಸ್ತಿ - ದ ಟೈಗರ್ ಹೂ ಕ್ರಾಸೆಡ್ ದಿ ಲೈನ್
SCROLL FOR NEXT