ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಾಂಬ್ ದಾಳಿ; ಕೇರಳ ಮೂಲದ ಇಸಿಸ್ ಉಗ್ರನ ಸಾವು!

ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕಾಸರಗೋಡು: ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ಅಮೆರಿಕ ಸೇನೆ ನಡೆಸಿದ್ದ ಅತೀ ದೊಡ್ಡ ಬಾಂಬ್ ದಾಳಿ ವೇಳೆ ಕೇರಳ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು  ತಿಳಿದುಬಂದಿದೆ.

ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಹತರಾಗಿದ್ದು, ಈ ಪೈಕಿ ಭಾರತದ ಕೇರಳ  ಮೂಲದ ಯುವಕ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಯುವಕರ ಪೈಕಿ ಈತ ಕೂಡ ಓರ್ವನಾಗಿದ್ದು, ಈತ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವನು ಎಂದು  ತಿಳಿದುಬಂದಿದೆ. ಮೃತನನ್ನು 21 ವರ್ಷದ ಮುರ್ಷೀದ್ ಎಂದು ಗುರಿತಿಸಲಾಗಿದ್ದು, ಈತನ ಸಾವಿನ ಕುರಿತಂತೆ ಕೇರಳದ ಕಾಸರಗೋಡಿನಲ್ಲಿರುವ ಆತನ ಕುಟುಂಬಸ್ಥಕರಿಗೆ ಟೆಲಿಗ್ರಾಮ್ ಸಂದೇಶ ಬಂದಿದೆ.

ಮುರ್ಷೀದ್ ಸಹೋದರ ಸಂಬಂಧಿ ಹಫೀಜುದ್ದೀನ್ ಥೆಕೆ ಕೊಲೆತ್ ಎಂಬುವವರಿಗೆ ಸಂದೇಶ ಬಂದಿದ್ದು, ಮೃತದೇಹವನ್ನು ಆಫ್ಘಾನಿಸ್ತಾನದಲ್ಲೇ ಮಣ್ಣು ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು  ಅಂದರೆ ಕಳೆದ ಫೆಬ್ರವರಿಯಲ್ಲಿ ಮತ್ತೋರ್ವ ಕೇರಳ ಮೂಲದ ಯುವಕ ಇದೇ ಆಫ್ಘಾನಿಸ್ತಾನದ ಬುಡಕಟ್ಟು ಪ್ರದೇಶಗಳ ಮೇಲೆ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸಾವಿಗೀಡಾಗಿದ್ದ.

ಕಳೆದ ವರ್ಷ ಕೇರಳ ಮೂಲದ 21 ಮಂದಿ ಯುವಕರು ದೇಶದಿಂದ ನಾಪತ್ತೆಯಾಗಿದ್ದರು. ಬಳಿಕ ಇವರ ಸಂಬಂಧಿಕರಿಗೆ ಬಂದ ಸಂದೇಶಗಳಲ್ಲಿ ಇವರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿರುವ ಕುರಿತು ಮಾಹಿತಿ  ಲಭ್ಯವಾಗಿತ್ತು. ಮೂಲತಃ ವಿವಿಧ ಕೋಮಿಗೆ ಸೇರಿದ್ದ ಇವರು ಬಳಿಕ ತಮ್ಮ ತಮ್ಮ ಧರ್ಮವನ್ನು ಬದಲಿಸಿಕೊಂಡು ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!