ಪ್ರಧಾನ ಸುದ್ದಿ

ಅಖಿಲೇಶ್ ಯಾದವ್, ಮುಲಾಯಂ ಸಿಂಗ್, ಮಾಯಾ ಭದ್ರತೆ ಹಿಂಪಡೆದ ಯೋಗಿ

Srinivas Rao BV
ಲಖನೌ: ಉತ್ತರ ಪ್ರದೇಶ ಸರ್ಕಾರ ಮಾಜಿ ಸಿಎಂ ಅಖಿಲೇಶ್ ಯಾದವ್, ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಬಿಎಸ್ ಪಿ ನಾಯಕಿ ಮಾಯಾವತಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದೆ. 
ವಿರೋಧಪಕ್ಷಗಳ ನಾಯಕರ ಭದ್ರತೆಯನ್ನು ಹಿಂಪಡೆಯಲಾಗಿದ್ದರೆ, ಆಡಳಿತ ಪಕ್ಷದ ಹಲವು ನಾಯಕರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬಿಜೆಪಿ ಮಾಜಿ ಸಂಸದ ವಿನಯ್ ಕಟೀಯಾರ್ ಅವರಿಗೆ ಇನ್ನು ಮುಂದೆ ಝೆಡ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗುತ್ತದೆ. 
ಏ.22 ರಂದು ಉತ್ತರ ಪ್ರದೇಶದಲ್ಲಿ ನಡೆದ ಗೃಹ ಇಲಾಖೆಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದ್ದು, ಏ.22 ರಂದು ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ. ಈ ವರೆಗೂ 151 ವಿಐಪಿ ಗಳಿಗೆ ಉನ್ನತ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು. ಈ ಪೈಕಿ 105 ವಿಐಪಿಗಳ ಭದ್ರತೆಯನ್ನು ಹಿಂಪಡೆಯಲಾಗಿದ್ದು, 46 ವಿಐಪಿಗಳ ಭದ್ರತಾ ಶ್ರೇಣಿಯನ್ನು ಕಡಿಮೆ ಮಾಡಲಾಗಿದೆ. 
SCROLL FOR NEXT