ನವದೆಹಲಿ: ಸಹ ಭಾರತೀಯ ಪ್ರಯಾಣಿಕನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಜೆಟ್ ಏರ್ವೇಸ್ ಪೈಲಟ್ ನಡೆಯನ್ನು ಖ್ಯಾತ ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್ ಬುಧವಾರ ಖಂಡಿಡಿಸಿದ್ದಾರೆ.
ಮುಂಬೈ ಪರವಾಗಿ ಐಪಿಎಲ್ ನಲ್ಲಿ ಆಡುತ್ತಿರುವ ಪಂಜಾಬಿ ಸ್ಪಿನ್ನರ್ ಟ್ವಿಟ್ಟರ್ ನಲ್ಲಿ ಬರೆದಿರುವ ಪ್ರಕಾರ ಬರ್ನ್ಡ್ ಹೊಸೇನ್ ಎಂಬ ಪೈಲಟ್ "ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಂಗವಿಕಲ ವ್ಯಕ್ತಿಯೊಬ್ಬರನ್ನು ನಿಂದಿಸಿ, ಬ್ಲಡಿ ಇಂಡಿಯನ್ಸ್" ಎಂದು ಕರೆದಿದ್ದಾಗಿ ತಿಳಿಸಿದ್ದಾರೆ.
ಹಲವು ಸರಣಿ ಟ್ವೀಟ್ ಮಾಡಿರುವ ಆಫ್ ಸ್ಪಿನ್ನರ್ ಭಾರತದ ನೆಲದಲ್ಲೇ ಅನ್ನ ಸಂಪಾದನೆ ಮಾಡಿ ಭಾರತೀಯರ ವಿರುದ್ಧ ನಿಂದನೆ ಮಾಡಿದ ಪೈಲಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈ ಬರ್ನ್ಡ್ ಹೊಸೇನ್ ಎಂದು ಕರೆಯಲ್ಪಟ್ಟ ಈ ಜೆಟ್ ಏರ್ವೇಸ್ ಪೈಲಟ್ ನನ್ನ ಸಹ ಪ್ರಯಾಣಿಕ ಭಾರತೀಯನನ್ನು (ಯು ಬ್ಲಡಿ ಇಂಡಿಯನ್) ಬೈದರು, ಆದರೆ ಅವರು ಇಲ್ಲೇ ಅನ್ನ ಸಂಪಾದಿಸುವುದು" ಎಂದು ಹರಭಜನ್ ಬರೆದಿದ್ದಾರೆ.
"ಅವರು ಜನನಾಂಗೀಯ ನಿಂದನೆ ಮಾಡಿದ್ದಷ್ಟೇ ಅಲ್ಲದೆ, ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ, ಅಂಗವಿಕಲ ವ್ಯಕ್ತಿಯನ್ನು ನಿಂದಿಸಿದರು... ಜೆಟ್ ಏರ್ವೇಸ್ ಇದು ನಾಚಿಕೆಗೇಡು ಮತ್ತು ಅಗೌರವ ತರುವಂತದ್ದು" ಎಂದು ಕೂಡ ಅವರು ಬರೆದಿದ್ದಾರೆ.
ಪೈಲಟ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದಿರುವ ೩೬ ವರ್ಷದ ಆಟಗಾರ "ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಮತ್ತು ನಮ್ಮ ದೇಶದಲ್ಲಿ ಇಂತಹವುಗಳನ್ನು ಸಹಿಸಿಕೊಳ್ಳಬಾರದು.. ನಾನು ಹೆಮ್ಮೆಯ ಭಾರತೀಯ, ನಾವೆಲ್ಲಾ ಒಟ್ಟಾಗಿ ಇದನ್ನು ಬಗೆಹರಿಸಬೇಕು" ಎಂದು ಕೂಡ ಹೇಳಿದ್ದಾರೆ.
ಹರಭಜನ್ ಕೆಲವು ಕಾಲ ವಿರಾಮ ತೆಗೆದುಕೊಂಡು ಗೆಳೆಯರು ಮತ್ತು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ಅಲಿಭಾಗ್ ಗೆ ಸಣ್ಣ ಪ್ರವಾಸಕ್ಕೆ ತೆರಳಿದ್ದ ಅವರು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪ್ರವಾಸದ ವಿಡಿಯೋ ತುಣುಕನ್ನು ಕೂಡ ಪ್ರಕಟಿಸಿದ್ದರು.