ಪ್ರಧಾನ ಸುದ್ದಿ

ಗೂಗಲ್ ನಲ್ಲಿ ಉದ್ಯೋಗ ಬೇಕೆಂದ ೭ ವರ್ಷದ ಬಾಲಕಿ; ಪಿಚೈ ಉತ್ತೇಜನಕಾರಿ ಪ್ರತಿಕ್ರಿಯೆ

Guruprasad Narayana
ಲಂಡನ್: ಬಹುತೇಕ ಮಕ್ಕಳಿಗೆ ಆಟ, ಗೊಂಬೆಗಳು ಮುದ ನೀಡುತ್ತವೆ. ಆದರೆ ಬ್ರಿಟನ್ನಿನ ಏಳು ವರ್ಷದ ಈ ಬಾಲಕಿ, ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದು ಉದ್ಯೋಗಕ್ಕಾಗಿ ಕೋರಿದ್ದಾಳೆ- ಮತ್ತು ಅದಕ್ಕಾಗಿ ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಪಡೆದಿದ್ದಾಳೆ. 
ಬ್ಯುಸಿನೆಸ್ ಇನ್ಸೈಡರ್ ಗುರುವಾರ ಪ್ರಕಟಿಸಿರುವ ವರದಿಯಲ್ಲಿ ಬ್ರಿಟನ್ನಿನ ಹೇರಿಫೋರ್ಡ್ ನಲ್ಲಿ ವಾಸಿಸುವ ಬಾಲಕಿ ಚೋಲೆ ಬ್ರಿಜ್ವಾಟರ್ ಉದ್ಯೋಗ ಬೇಡಿಕೆಯಿತ್ತು ಕೈಬರಹದಲ್ಲಿ ಪಿಚೈ ಅವರಿಗೆ ಪತ್ರ ಬರೆದಿದ್ದಾರೆ. 
"ಪ್ರಿಯ ಗೂಗಲ್ ಬಾಸ್.. ನನ್ನ ಹೆಸರು ಚೋಲೆ ಮತ್ತು ನಾನು ದೊಡ್ಡವಳಾಗಿ ಬೆಳೆದಾಗ ಗೂಗಲ್ ನಲ್ಲಿ ಕೆಲಸ ಮಾಡಬೇಕೆಂಬ ಆಸೆ. ನನಗೆ ಚಾಕೊಲೇಟ್ ಕಾರ್ಖಾನೆಯಲ್ಲಿಯೂ ಕೆಲಸ ಮಾಡಲು ಇಷ್ಟ ಮತ್ತು ಒಲಂಪಿಕ್ಸ್ ನಲ್ಲಿ ಈಜಬೇಕೆಂಬ ಆಸೆಯೂ ಇದೆ" ಎಂದು ಬ್ರಿಜ್ವಾಟರ್ ಪಿಚೈ ಅವರಿಗೆ ಬರೆದಿದ್ದಾಳೆ. 
ಹಾಗೆಯೇ ತನ್ನ ಕನಸುಗಳು, ಶಾಲೆ, ತನ್ನ ಸಹೋದರಿ ಮತ್ತು ಕ್ರಿಸ್ಮಸ್ ಗೆ ತನ್ನ ತಂದೆಗೆ ಬರೆದ್ದ ಮೊದಲ ಪತ್ರದ ಬಗ್ಗೆಯೂ ಅವಳು ಬರೆದಿದ್ದಾಳೆ. 
ಇದಕ್ಕೆ ಪ್ರತಿಕ್ರಿಯಿಸಿರುವ ಪಿಚೈ ಕನಸುಗಳನ್ನು ಬೆಂಬತ್ತುವಂತೆ ಪ್ರೋತ್ಸಾಹಿಸಿದ್ದು "ನೀನು ಶಾಲೆ ಮುಗಿಸಿದ ಮೇಲೆ ನಿನ್ನ ಉದ್ಯೋಗ ಅರ್ಜಿಗಾಗಿ ಕಾಯುತ್ತಿರುತ್ತೇನೆ" ಎಂದು ಬರೆದಿದ್ದಾರೆ. 
ಲಿಂಕ್ ಡಿನ್ ಸಾಮಾಜಿಕ ಅಂತರ್ಜಾಲ ಪೋಸ್ಟ್ ಒಂದರಲ್ಲಿ ಈ ಬಾಲಕಿಯ ತಂದೆ ಆಂಡಿ ಬ್ರಿಜ್ವಾಟರ್ ಬರೆದಿರುವಂತೆ, ನನ್ನ ಪುತ್ರಿ ಎರಡೂ ವರ್ಷಗಳ ಹಿಂದೆ ಕಾರು ಅಪಘಾತಕ್ಕೆ ತುತ್ತಾಗಿ, ಅವಳ ಆತ್ಮವಿಶ್ವಾಸ ಕುಂದುಹೋಗಿತ್ತು ಎಂದಿದ್ದಾರೆ. 
"ಆದರೆ ಪಿಚೈ ನಿಂದ ಪತ್ರ ಪಡೆದಿರುವ ಅವಳು ಅತೀವ ಸಂತಸದಿಂದಿದ್ದಾಳೆ" ಎಂದು ಕೂಡ ಅವರು ಬರೆದಿದ್ದಾರೆ. 
SCROLL FOR NEXT