ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿರುದ್ಧ ಪ್ರತಿತಂತ್ರ ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಬಣದ ಕೆಲವು ನಾಯಕರು ಶುಕ್ರವಾರ ವಿಧಾನಸಭೆ ಸ್ಪೀಕರ್ ಪಿ.ಧನಪಾಲ್ ಅವರನ್ನು ಭೇಟಿ ಮಾಡಿದ್ದಾರೆ.
ಪಳನಿಸ್ವಾಮಿ ಅವರು ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಬಣದ ಶಾಸಕರಾದ ಕೆ ಪಾಂಡಿಯಾರಾಜನ್, ಎಸ್ ಸೆಮ್ಮಲಾಯಿ ಹಾಗೂ ಷನ್ಮುಗನಾಥನ್ ಮತ್ತು ಹಿರಿಯ ನಾಯಕರಾದ ಸಿ ಪೊನ್ನಯನ್ ಅವರು ಇಂದು ಸ್ಪೀಕರ್ ಭೇಟಿ ಮಾಡಿ ಮಾತುಕತೆ ನಡೆಸಿದೆ. ಆದರೆ ಸ್ಪೀಕರ್ ಭೇಟಿಯ ಬಳಿಕ ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಪನ್ನೀರ್ ಸೆಲ್ವಂ ಬಣದಲ್ಲಿ ಎಐಎಡಿಎಂಕೆ ಹತ್ತು ಶಾಸಕರಿದ್ದು, ಅವರು ನಾಳೆ ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವ ಸಾಧ್ಯತೆ ಇದೆ.