ನವದೆಹಲಿ: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ಎರಡು ದಿನಗಳಲ್ಲಿ ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿರುವ ಎರಡನೇ ಘಟನೆ ಇದು.
ನೆನ್ನೆಯಷ್ಟೇ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಿಬಿಐ ಬಂಧಿಸದ್ದು, ಇದು ರಾಜಕೀಯ ಪಿತೂರಿ ಎಂದು ದೂರಿ ಕೋಲ್ಕತ್ತಾದ ಬಿಜೆಪಿ ಮುಖ್ಯ ಕಚೇರಿಯ ಮೇಲೆ ಟಿಎಂಸಿ ವಿದ್ಯಾರ್ಥಿ ಘಟಕ ದಾಳಿ ಮಾಡಿತ್ತು.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.