ಪ್ರಧಾನ ಸುದ್ದಿ

ನೋಟು ನಿಷೇಧದಿಂದ ಆರ್ಥಿಕ ಸ್ಥಿತಿ ಕುಂಠಿತವಾಗುವ ಸಾಧ್ಯತೆ: ರಾಷ್ಟ್ರಪತಿ

Guruprasad Narayana
ನವದೆಹಲಿ: ನೋಟು ಹಿಂಪಡೆತ ನಿರ್ಧಾರದಿಂದ ದೇಶದ ಆರ್ಥಿಕ ಸ್ಥಿತಿ ತಾತ್ಕಾಲಿಕವಾಗಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ಹೇಳಿದ್ದಾರೆ. 
"ಕಪ್ಪು ಹಣಕ್ಕೆ ತಡೆ ಹಾಕಿದ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ನೋಟು ಹಿಂಪಡೆತ ನಿರ್ಧಾರದಿಂದ ದೇಶದ ಆರ್ಥಿಕ ಸ್ಥಿತಿ ತಾತ್ಕಾಲಿಕವಾಗಿ ಕುಂಠಿತವಾಗುವ ಸಾಧ್ಯತೆ ಇದೆ" ಎಂದು ರಾಜ್ಯಲಪರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳನ್ನುದ್ದೇಶಿಸಿ ಮಾಡಿದ ವಿಡಿಯೋ ಭಾಷಣದ ವೇಳೆ ರಾಷ್ಟ್ರಪತಿ ಹೇಳಿದ್ದಾರೆ. 
"ಮುಂದೆ ಅಭಿವೃದ್ಧಿ ನಿರೀಕ್ಷೆಯಲ್ಲಿ, ಸದ್ಯಕ್ಕೆ ತಡೆಯಲಾಸಾಧ್ಯವಾಗಬಹುದಾದ ಬಡ ಜನರ ತೊಂದರೆಗಳನ್ನು ಸರಿಪಡಿಸಲು ನಾವೆಲ್ಲರೂ ಹೆಚ್ಚು ಎಚ್ಚರಿಕೆಯಿಂದರಬೇಕು" ಎಂದು ಕೂಡ ಮುಖರ್ಜಿ ಹೇಳಿದ್ದಾರೆ. 
SCROLL FOR NEXT