ನಜೀಬ್ ಜಂಗ್-ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಸಾರ್ವಜನಿಕವಾಗಿ ಕೇಜ್ರಿವಾಲ್ ವಿರುದ್ಧ ಎಂದಿಗೂ ಮಾತನಾಡಲಿಲ್ಲ: ಜಂಗ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ಎಂದಿಗೂ ಮಾತನಾಡಲಿಲ್ಲ ಎಂದು ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ಹೇಳಿದ್ದಾರೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ಎಂದಿಗೂ ಮಾತನಾಡಲಿಲ್ಲ ಎಂದು ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ಹೇಳಿದ್ದಾರೆ. 
ಸುದ್ದಿವಾಹಿನಿಯೊಂದಿಗೆ ಜಂಗ್ ನೀಡಿರುವ ಸಂದರ್ಶನದಲ್ಲಿ "ಯಾವುದೇ ವಿಷಯದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾರ್ವಜನಿಕವಾಗಿ ನಾನು ಎಂದಿಗೂ ಮಾತನಾಡಲಿಲ್ಲ. ನನ್ನೆಲ್ಲ ಕ್ರಮಗಳು ಕಡತಗಳ ಮೂಲಕ ಆಗುತ್ತಿದ್ದವು."
ಬಹುತೇಕ ಎಲ್ಲ ವಿಷಯಗಳಲ್ಲೂ ಆಮ್ ಆದ್ಮಿ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಒಪ್ಪಿಕೊಂಡಿರುವ ಜಂಗ್, ದೆಹಲಿ ಸರ್ಕಾರ ಕಳುಹಿಸಿದ್ದ ೮೦ ಕಡತಗಳನ್ನು ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. 
"ನಾವು ನಿಲುವಗಳ ಮೇಲೆ ಭಿನ್ನಾಭಿಪ್ರಯ ತಾಳುತ್ತಿದ್ದೆವು ಆದರೆ ವಾದ ಮಾಡುತ್ತಿರಲಿಲ್ಲ. ನಾನು ಮಾಡಿದ್ದು ಸಂವಿಧಾನದ ರಕ್ಷಣೆಗಾಗಿ ಮಾತ್ರ. 
"ದೆಹಲಿ ಸರ್ಕಾರದ ಮುಖ್ಯಸ್ಥರಿಗೆ ಕೆಲವು ನಿರ್ಬಂಧಗಳಿದ್ದವು ಮತ್ತು ನಾನು ಸಂವಿಧಾನವನ್ನು ಕಾಪಾಡಬೇಕಿತ್ತು" ಎಂದು ಜಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT