ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್
ಪಾಟ್ನಾ: ಸಮಾಜವಾದಿ ಪಕ್ಷ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳಲು ಸಫಲರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿರುವ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಸಮಾಜ ವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಪುತ್ರನನ್ನು ಆಶೀರ್ವದಿಸಿ, ಮತ್ತೆ ಒಂದಾಗಬೇಕು ಎಂದು ಸೋಮವಾರ ಸಲಹೆ ನೀಡಿದ್ದಾರೆ.
"ನೇತಾಜಿಯವರು (ಮುಲಾಯಂ ಸಿಂಗ್ ಯಾದವ್) ಸಮಯಹರಣ ಮಾಡದೆ ಅಖಿಲೇಶ್ ಅವರಿಗೆ ಆಶೀರ್ವದಿಸಬೇಕೆಂದು ನಾನು ಕೋರುತ್ತೇನೆ" ಎಂದು ಲಾಲು ಪ್ರಸಾದ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಕಿತ್ತಾಡದಂತೆ ಮುಲಾಯಂ ಮತ್ತು ಅಖಿಲೇಶ್ ಅವರಿಗೆ ಸಲಹೆ ನೀಡಿರುವ ಲಾಲು 'ಕೋಮುವಾದಿ ಶಕ್ತಿಗಳಿಗೆ' ಕಡಿವಾಣ ಹಾಕಲು ಇಬ್ಬರು ಒಗ್ಗಟ್ಟಾಗಿರುವುದು ಮುಖ್ಯ ಎಂದಿದ್ದಾರೆ.
"ಸಮಾಜವಾದಿ ಪಕ್ಷದ ಒಡಕಿನಿಂದ ಕೋಮುವಾದಿ ಶಕ್ತಿಗಳಿಗೆ ಅನುಕೂಲವಾಗುತ್ತಿದೆ.. ನರೇಂದ್ರ ಮೋದಿ ಅಧಿಕಾರಕ್ಕೆ (ಉತ್ತರಪ್ರದೇಶದಲ್ಲಿ) ಬಂದರೆ ಈ ದೇಶವನ್ನು ಉಳಿಸುವುದು ಸಾಧ್ಯವಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
ಅಖಿಲೇಶ್ ಅವರ ಯಶೋಗಾಥೆ ತಂದೆ ಮುಲಾಯಂ ಸಿಂಗ್ ಅವರ ಗೆಲುವೇ ಎಂದು ಕೂಡ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಬಣ್ಣಿಸಿದ್ದಾರೆ.