ಪ್ರಧಾನ ಸುದ್ದಿ

ಪಾಕಿಸ್ತಾನವನ್ನು ಐರನ್ ಬ್ರದರ್ ಎಂದ ಚೀನಾ!

Srinivas Rao BV
ಬೀಜಿಂಗ್: ಪಾಕಿಸ್ತಾನದ ಉಗ್ರರು ಚೀನಾದ ಇಬ್ಬರು ನಾಗರಿಕರನ್ನು ಹತ್ಯೆ ಮಾಡಿರುವ ಹೊರತಾಗಿಯೂ ಪಾಕಿಸ್ತಾನವನ್ನು ದೂಷಿಸುವಂತಿಲ್ಲ ಎಂದು ಚೀನಾದ ಮಾಧ್ಯಮಗಳಲ್ಲಿ ವರದಿಯಾಗಿದೆ. ಚೀನಾದ ಇಬ್ಬರು ಬೋಧಕ ವರ್ಗದ ಸಿಬ್ಬಂದಿಗಳು ಹತ್ಯೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ಈ ಹತ್ಯೆಗೆ ಪಾಕಿಸ್ತಾನವನ್ನು ದೂಷಿಸಲು ಸಾಧ್ಯವಿಲ್ಲ. ಚೀನಾ ಬೋಧಕ ಸಿಬ್ಬಂದಿಗಳ ಹತ್ಯೆಗೆ ದಕ್ಷಿಣ ಕೊರಿಯಾದ ಮತಪ್ರಚಾರಕರು ಕಾರಣ ಎಂದು ದೂಷಿಸಿದೆ. 
ಪಾಕಿಸ್ತಾನದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ವರದಿಗಳನ್ನು ಚೀನಾ ತಳ್ಳಿಹಾಕಿದ್ದು, ತನ್ನ ನಾಗರಿಕರ ಸಾವಿಗೆ ದಕ್ಷಿಣ ಕೊರಿಯದ ಮತ ಪ್ರಚಾರಕರು ಕಾರಣ ಎಂದು ಹೇಳಿದೆ. ಇದೇ ವೇಳೆ ಪಾಕಿಸ್ತಾನವನ್ನು ಐರನ್ ಬ್ರದರ್ ಎಂದು ಉಲ್ಲೇಖಿಸಿರುವ ಚೀನಾ ಈ ಘಟನೆಗೆ ಪಾಕಿಸ್ತಾನವನ್ನು ದೂಷಿಸುವಂತಿಲ್ಲ ಎಂದು ಹೇಳಿದೆ. 
ಚೀನಾ ನಾಗರಿಕರ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಚೀನಾ ನಾಗರಿಕರು ದಕ್ಷಿಣ ಕೊರಿಯಾದ ಕ್ರೈಸ್ತ ಸಂಘಟನೆಗೆ ಸೇರಿದ ಮತಪ್ರಚಾರಕರಾಗಿದ್ದರೆಂದು ಹೇಳಿತ್ತು. ಈ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಪ್ರಕಟಿಸಿದ್ದು, ವಿಷಯವನ್ನು ಭಾರತೀಯ ಮಾಧ್ಯಮಗಳು ವೈಭವೀಕರಿಸಿವೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ. ನಾಗರಿಕರ ಹತ್ಯೆಯಂತಹ ದುರದೃಷ್ಟಕರ ಘಟನೆಗಳಿಂದ ಚೀನಾ-ಪಾಕಿಸ್ತಾನ ಸಂಬಂಧಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದೂ ಚೀನಾದ ಮಾಧ್ಯಮ ಗ್ಲೋಬಲ್ ಟೈಮ್ಸ್ ಇದೇ ವೇಳೆ ತಿಳಿಸಿದೆ. 
SCROLL FOR NEXT