ಪ್ರಧಾನ ಸುದ್ದಿ

'ಜಾತ್ಯಾತೀತ ಅಂಗಡಿ'ಯನ್ನು ನಡೆಸುವದನ್ನು ನಿಲ್ಲಿಸಿ: ಕಾಂಗ್ರೆಸ್ ಗೆ ಒವೈಸಿ

Guruprasad Narayana
ನವದೆಹಲಿ: ಕಾಂಗ್ರೆಸ್ 'ಜಾತ್ಯಾತೀತ ಅಂಗಡಿ'ಯನ್ನು ನಡೆಸುತ್ತಿದೆ ಎಂದು ದೂರಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಅದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. 
ಮೋದಿ ಸರ್ಕಾರದ ಕೆಳಗೆ ಭಾರತೀಯ ಮುಸ್ಲಿಮರಿಗೆ ವಿಮುಖತೆ ಕಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಒವೈಸಿ, ಕಾಂಗ್ರೆಸ್ ಆಡಳಿತ ಸಮಯದಲ್ಲಿಯೂ ಮುಸ್ಲಿಮರು ಹೆಚ್ಚು ತೊಂದರೆಗಳನ್ನು ಎದುರಿಸುತ್ತಿದ್ದರು ಎಂದಿದ್ದಾರೆ. 
"ನಾನು ಭಯೋತ್ಪಾದಕ ತಜ್ಞ ಅಲ್ಲ. ಅವರು (ದಿಗ್ವಿಜಯ್ ಸಿಂಗ್) ಇರಬಹುದು. ಆದರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ೧೫ ವರ್ಷಗಳ ಕಾಲ ಆಡಳಿತ ನಡೆಸಿತ್ತು ಆದರೆ ವಿಚಾರಣೆಯಲ್ಲಿದ್ದ ೨೮ ಮುಸ್ಲಿಮರು ಜೈಲುಗಳಲ್ಲಿ ಕೊಳೆಯುತ್ತಿದ್ದರು" ಎಂದು ಒವೈಸಿ ಸುದ್ದಿವಾಹಿನಿಯೊಂದಕ್ಕೆ ಹೇಳಿದ್ದಾರೆ. 
"ಅಲ್ಲದೆ, ಔರಂಗಾಬಾದ್ ಶಸ್ತ್ರಾಸ್ತ್ರ ಪ್ರಕರಣ, ಮಾಲೆಗಾಂವ್ ಪ್ರಕರಣ ಮತ್ತು ೭/೧೧ ರೈಲು ಸ್ಫೋಟ ಎಲ್ಲವು ಕಾಂಗ್ರೆಸ್ ಆಡಳಿತದಲ್ಲಿಯೇ ಸಂಭವಿಸಿದ್ದು. ಇವಲ್ಲದೆ ಇನ್ನು ಹಲವಾರು ಅಸಂಖ್ಯಾತ ಪ್ರಕರಣಗಳಿವೆ, ಅವೆಲ್ಲವನ್ನು ನಾನು ಹೇಳಬೇಕಿಲ್ಲ"ಎಂದು ಕೂಡ ಅವರು ದೂರಿದ್ದಾರೆ. 
ಭಯೋತ್ಪಾದನೆ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಒವೈಸಿ ಹೇಳಿದ್ದಾರೆ. 
"ನಾನು ಹೇಳುವುದೆಂದರೆ ಕಾಂಗ್ರೆಸ್ 'ಜಾತ್ಯಾತೀತ ಅಂಗಡಿಯನ್ನು' ನಡೆಸುವುದನ್ನು ಮತ್ತು ಬಿಜೆಪಿ "ರಾಷ್ಟ್ರಪ್ರೇಮ ಅಂಗಡಿ'ಯನ್ನು ನಡೆಸುವುದನ್ನು ನಿಲ್ಲಿಸಬೇಕು" ಎಂದು ಅಖಿಲ ಭಾರತೀಯ ಮಜಲಿಸ್ ಇತ್ತೆಹಾದುಲ್ ಮುಸ್ಲಿಮೀನ್ ಮುಖಂಡ ಹೇಳಿದ್ದಾರೆ. 
SCROLL FOR NEXT