ಪ್ರಧಾನ ಸುದ್ದಿ

ರಾಹುಲ್, ಆಂಟನಿ ವಿರುದ್ಧ ಹರಿಹಾಯ್ದು ಕಾಂಗ್ರೆಸ್ ತ್ಯಜಿಸಿದ ಕೇರಳ ಯುವ ಕಾಂಗ್ರೆಸ್ ಮುಖಂಡ

Guruprasad Narayana
ಕೊಲ್ಲಮ್: ಫೇಸ್ಬುಕ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಎ ಕೆ ಆಂಟನಿ ಅವರನ್ನು ಟೀಕಿಸಿದ ಒಂದು ದಿನದ ನಂತರ ಕೇರಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪಕ್ಷ ತೊರೆಯುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ. 
ರಾಹುಲ್ ಅವರನ್ನು ಟೀಕಿಸದ ಬೆನ್ನಲ್ಲೇ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಮಹೇಶ್ ಅವರನ್ನು ಪಕ್ಷದಿಂದ ವಜಾಗೊಳಿಸಿತ್ತು. ಆದರೆ ಈ ರದ್ದುಗೊಳಿಸಿದ್ದನ್ನು ಸಾರ್ವಜನಿಕವಾಗಿ ಘೋಷಿಸುವ ಮೊದಲೇ ಪಕ್ಷ ತೊರೆಯುತ್ತಿರವುದಾಗಿ ಅವರು ಘೋಷಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಮಹೇಶ್ ಈ ಘೋಷಣೆಯನ್ನು ಮಾಡಿದ್ದಾರೆ. "ಪೂರ್ಣಾವಧಿ ರಾಜಕೀಯಕ್ಕೆ ವಿರಾಮ ಘೋಷಿಸಲು ನಾನು ನಿರ್ಧರಿಸಿದ್ದೇನೆ ಮತ್ತು ಇನ್ನು ಬದುಕಲು ಮುಂದಾಗುತ್ತೇನೆ. ಬೇರೆ ಯಾವುದೇ ರಾಜಕೀಯ ಪಕ್ಷವನ್ನು ನಾನು ಸೇರುತ್ತಿಲ್ಲ" ಎಂದು ಅವರು ಹೇಳಿದ್ದಾರೆ. 
ಮಂಗಳವಾರ ಫೇಸ್ಬುಕ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದ ಮಹೇಶ್, ಪಕ್ಷವನ್ನು ಮುನ್ನಡೆಸುವ ಇಚ್ಛೆ ಇಲ್ಲದಿದ್ದರೆ ಇತರರಿಗೆ ದಾರಿ ಮಾಡಕೊಡಬೇಕೆಂದು ಹೇಳಿದ್ದಲ್ಲದೆ, ಎ ಕೆ ಆಂಟನಿ ಅವರನ್ನು 'ಮೌನ ಮುನಿ' ಎಂದು ಕರೆದು ಮೌನ ಮುರಿಯುವಂತೆ ತಾಕೀತು ಮಾಡಿದ್ದರು. 
ಕೊಲ್ಲಮ್ ಜಿಲ್ಲೆಯ ಕರುನಾಗಪಲ್ಲಿಯಿಂದ ೨೦೧೬ ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಹೇಶ್ ಸಿಪಿಐ ನ ಆರ್ ರಾಮಚಂದ್ರನ್ ಎದುರು ಸೋತಿದ್ದರು.
ಪಕ್ಷದ ಹಿರಿಯ ಮುಖಂಡರ ವಿರುದ್ಧ ಪ್ರತಿಕ್ರಿಯೆ ನೀಡಿದ್ದಕ್ಕೆ ಮಹೇಶ್ ವಿರುದ್ಧ ಕೇರಳದ ಮಾಜಿ ಮುಖಮಂತ್ರಿ ಓಮನ್ ಚಾಂಡಿ ಟೀಕಿಸಿದ್ದರು. ಈ ಪ್ರತಿಕ್ರಿಯೆಗಳನ್ನು ಸಾರ್ವಜನಿಕವಾಗಿ ಹೇಳುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲ ಅವರು ಕೂಡ ಹೇಳಿದ್ದರು. 
SCROLL FOR NEXT