ಪ್ರಧಾನ ಸುದ್ದಿ

ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಕ್ಕೆ ನಮ್ಮ ಸಂಸ್ಥೆಯನ್ನು ದೂಷಿಸಲಾಗುತ್ತಿದೆ: ಶ್ರೀ ಶ್ರೀ ರವಿಶಂಕರ್

Guruprasad Narayana
ಬೆಂಗಳೂರು: ದೆಹಲಿಯಲ್ಲಿ ಯಮುನಾ ನದಿಯ ತೀರದಲ್ಲಿ ವಿಶ್ವ ಸಂಸ್ಕೃತಿ ಹಬ್ಬವನ್ನು ಆಯೋಜಿಸಿದ ಮುಖ್ಯ ಗುರಿ ನದಿಯ ಮಾಲಿನ್ಯವನ್ನು ಬೆಳಕಿಗೆ ತರುವುದಾಗಿತ್ತು ಎಂದು ಮಂಗಳವಾರ ಹೇಳಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ಒಳ್ಳೆಯ ಕೆಲಸಕ್ಕಾಗಿ ನಮ್ಮನ್ನು ದೂಷಿಸಲಾಗುತ್ತಿದೆ ಎಂದಿದ್ದಾರೆ. 
"ನಮ್ಮ ಗುರಿ, ಈ ಕಾರ್ಯಕ್ರಮ ಪೂರ್ತಿಯಾಗಿ ಯಮುನಾ ನದಿಯಲ್ಲಿ ಇರುವ ಕೊಳೆ ಮತ್ತು ಮಲಿನದ ಬಗ್ಗೆ ಜನರ ಗಮನ ಸೆಳೆಯುವುದಾಗಿತ್ತು. ಇದರ ಬಗ್ಗೆ ಸರ್ಕಾರದ ಜೊತೆಗೂ ಚರ್ಚಿಸಿ ನದಿಯನ್ನು ಶುಚಿಗೊಳಿಸಬೇಕೆಂಬುದು ನಮ್ಮ ಇರಾದೆಯಾಗಿತ್ತು" ಎಂದು ಸಾವಯವ ಕೃಷಿ ಸಮಾವೇಶದಲ್ಲಿ ರವಿಶಂಕರ್ ಹೇಳಿದ್ದಾರೆ.
ಈ ಕಾರ್ಯಕ್ರಮ ನದಿಯ ಮಾಲಿನ್ಯವನ್ನು ಹೆಚ್ಚಿಸಿದ್ದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. 
ನದಿಗಳ ಪುನರುಜ್ಜೀವನ ಮತ್ತು ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಆಧ್ಯಾತ್ಮ ಗುರು ಕರೆ ಕೊಟ್ಟಿದ್ದಾರೆ. 
SCROLL FOR NEXT