ಪ್ರಧಾನ ಸುದ್ದಿ

ಐಎಎಸ್ ಅಧಿಕಾರಿ ತಿವಾರಿ ನಿಗೂಢ ಸಾವು: ಕುಟುಂಬದಿಂದ ಕೊಲೆ ಪ್ರಕರಣ ದಾಖಲು

Lingaraj Badiger
ಲಖನೌ: ಕರ್ನಾಕಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅಧಿಕಾರಿಯ ಕುಟುಂಬ ಸೋಮವಾರ ಕೊಲೆ ಪ್ರಕರಣ ದಾಖಲಿಸಿದೆ.
ಅನರಾಗ್ ತಿವಾರಿ ಅನುಮಾನ್ಸಪದ ಸಾವಿನ ಕುರಿತು ಲಖೌನನ ಹಜರತ್ ಗಂಜ್ ಪೊಲೀಸ್ ಠಾಣೆಗೆ ಇಂದು ಅವರ ಸಹೋದರ ಮಾಯಾಂಕ್ ತಿವಾರಿ ಅವರು ದೂರು ನೀಡಿದ್ದು, ಐಪಿಸಿ ಸೆಕ್ಷೆನ್ 302ರಡಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರಿಗೆ ದೂರು ನೀಡುವ ಮುನ್ನ ಅನುರಾಗ್ ತಿವಾರಿ ಕುಟುಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಸಿಎಂ ಯೋಗಿ ಭೇಟಿ ಮಾಡಿದ ಬಳಿಕ ಮಾತನಾಡಿದ ಅನುರಾಗ್ ಅವರ ತಾಯಿ ಸುಶಿಲಾ, ಪತ್ನಿ ಸುಭ್ರಾ ಹಾಗೂ ಸಹೋದರ ಮಾಯಾಂಕ್ ಅವರು, ತಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಖಂಡಿತವಾಗಿಯೂ ಇದೊಂದು ಕೊಲೆ ಎಂದಿರುವ ಮಾಯಾಂಕ್ ತಿವಾರಿ ಅವರು, ಅನುರಾಗ್ ತಂಗಿದ್ದ ರೂಂ ಲಾಕ್ ಆಗಿಲ್ಲ ಮತ್ತು ಅವರ ಫೋನ್ ಸಹ ಲಾಕ್ ಆಗಿಲ್ಲ ಮತ್ತು ಅವರಿಗೆ ಜೀವ ಬೆದರಿಕೆ ಇತ್ತು ಎಂದು ಹೇಳಿದ್ದಾರೆ.
ಇನ್ನು ನನ್ನ ಮಗನ ಸಾವಿನ ಕುರಿತು ಸೂಕ್ತೆ ತನಿಖೆಯಾಗಬೇಕು. ಸಿಬಿಐಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಸುಶಿಲಾ ಅವರು ಹೇಳಿದ್ದಾರೆ.
ಮೇ 17ರಂದು ಲಖನೌನ ಹಜರತ್ ಗಂಜ್ ಮೀರಾಬಾಯ್ ಹೆಸ್ಟ್ ಹೌಸ್ ಬಳಿ 2007ನೇ ಬ್ಯಾಚ್ ನ ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಶವ ಪತ್ತೆಯಾಗಿತ್ತು. ರಾಜ್ಯದ ಐಎಎಸ್ ಅಧಿಕಾರಿ ತಮ್ಮ 36ನೇ ಹುಟ್ಟುಹಬ್ಬದಂದೆ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
SCROLL FOR NEXT