ಪ್ರಧಾನ ಸುದ್ದಿ

೨೧ ಬಾರಿ ಎವರೆಸ್ಟ್ ಏರಿ ದಾಖಲೆ ಸರಿಗಟ್ಟಿದ ನೇಪಾಳಿ ಶೆರ್ಪಾ

Guruprasad Narayana
ಖಟ್ಮಂಡು: ಮೌಂಟ್ ಎವರೆಸ್ಟ್ ಅನ್ನು ೨೧ ನೇ ಬಾರಿ ಏರುವ ಮೂಲಕ, ಈ ಸಾಧನೆಗೈದ ಮೂರನೇ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ೪೭ ವರ್ಷದ ನೇಪಾಳಿ ಶೆರ್ಪಾ ಭಾಜನರಾಗಿದ್ದಾರೆ. 
ಭೂಮಟ್ಟದಿಂದ ೮,೮೪೮ ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಮೇಲೆ ಬೆಳೆಗ್ಗೆ ೮:೧೫ ಕ್ಕೆ ಕಾಮಿ ರೈತ ಶೆರ್ಪಾ ೨೧ ನೇ ಬಾರಿಗೆ ಕಾಲಿಸಿರಿಸಿದ್ದಾರೆ.
ಈ ಹಿಂದೆ ಅಪ ಶೆರ್ಪಾ ಮತ್ತು ಫುರ್ಬ ತಶಿ ಶೆರ್ಪಾ ೨೧ ಬಾರಿ ಮೌಂಟ್ ಎವರೆಸ್ಟ್ ಏರುವ ದಾಖಲೆ ಬರೆದಿದ್ದಾರೆ. 
೧೯೫೩ ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನಾರ್ವೆ ಮೊದಲ ಬಾರಿಗೆ ಎವರೆಸ್ಟ್ ಪರ್ವತಾರೋಹಣವನ್ನು ಯಶಸ್ವಿಯಾಗಿ ಮಾಡಿದ್ದರು. ಇದರ ನಂತರ ಪ್ರತಿ ಪರ್ವತಾರೋಹಿಗಳ ಸಾಹಸಮಯ ಕನಸಾಗಿದೆ ಎವರೆಸ್ಟ್. 
ಮೌಂಟ್ ಎವರೆಸ್ಟ್ ತೆರಳುವ ದುರ್ಗಮ ಹಾದಿಯಲ್ಲಿ ಈ ವರ್ಷವೇ ೧೦ ಅಪಘಾತಗಳಾಗಿವೆ. ೧೯೫೩ ರ ನಂತರ ಈ ಸಾಧನೆಯನ್ನು ಮಾಡಲು ಹೊರಟವರಲ್ಲಿ ೩೦೦ ಜನ ಮೃತಪಟ್ಟಿದ್ದಾರೆ ಮತ್ತು ೨೦೦ ಮೃತದೇಹಗಳು ಇನ್ನು ಈ ಪರ್ವತದಲ್ಲಿ ಸಿಲುಕಿವೆ ಎಂದು ಅಂದಾಜಿಸಲಾಗಿದೆ.
ಈ ಋತುವಿನಲ್ಲಿ ಈ ಪರ್ವತ ಏರಲು ಪರೀಕ್ಷೆ ನಡೆಸಿ ನೇಪಾಳ ೩೭೧ ಪರ್ವತಾರೋಹಿಗಳಿಗೆ ಅವಕಾಶ ನೀಡಿತ್ತು.  
SCROLL FOR NEXT