ಪ್ರಧಾನ ಸುದ್ದಿ

ಗುಜರಾತ್: ಪ್ರಧಾನಿ ಮೋದಿಯಿಂದ ಸರ್ದಾರ್ ಸರೋವರ ಅಣೆಕಟ್ಟೆ ದೇಶಕ್ಕೆ ಸಮರ್ಪಣೆ

Raghavendra Adiga
ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ತಮ್ಮ 67ನೇ ಜನ್ಮದಿನದ ಸಂದರ್ಭದಲ್ಲಿ ಸರ್ದಾರ್‌ ಸರೋವರ್‌ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದರು.
ದಶಕಗಳ ಕಾಲ ಹಲವು ಏಳು-ಬೀಳುಗಳನ್ನು ಕಂಡ ಸರ್ದಾರ್‌ ಅಣೆಕಟ್ಟೆ ಗೆ ಇಂದು ಉದ್ಘಾಟನೆ ಭಾಗ್ಯ ಒದಗಿಬಂದಿದೆ. 
ಈ ಅಣೆಕಟ್ಟೆ ವಿದ್ಯುತ್‌ ಉತ್ಪಾದನೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನು ತರಲಿದೆ. 4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ) ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ ಈ ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿತ್ತು. ಇದರಿಂದ ಗುಜರಾತ್, ರಾಜಾಸ್ಥಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ರೈತರಿಗೆ ಲಾಭವಾಗಲಿದೆ.
ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ. ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರಕುವ ನಿರೀಕ್ಷೆ ಇದೆ. 
SCROLL FOR NEXT