ಪ್ರವಾಸ-ವಾಹನ

ಕಾರ್ ಇನ್ಶೂರೆನ್ಸ್ ಕಂಪನಿ ಬದಲಿಸುವಾಗ ಗಮನಿಸಬೇಕಾದ 5 ಅಂಶಗಳು

Sumana Upadhyaya
ಕಾರು ವಿಮೆ ಮನುಷ್ಯನ ವಹಿವಾಟುಗಳಲ್ಲಿ ಮುಖ್ಯವಾದುದು. ಕಾರು ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕಾರು ವಿಮೆ ಬದಲಾಯಿಸಿಕೊಳ್ಳುವಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಈ 5 ಅಂಶಗಳು ಸಹಾಯಕ್ಕೆ ಬರಬಹುದು. 
1. ಯಾಕೆ?: ಹಲವು ಸಂದರ್ಭಗಳಲ್ಲಿ ನಾವು ಯಾವುದೇ ಯೋಚನೆಯಿಲ್ಲದೆ, ಸೂಕ್ತ ಕಾರಣಗಳಿಲ್ಲದೆ ವಿಮಾಗಾರರನ್ನು ಬದಲಾಯಿಸುತ್ತೇವೆ.ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಸೂಕ್ತ ಕಾರಣಗಳು ನಮ್ಮಲ್ಲಿರಬೇಕು. ಕಳಪೆ ಗ್ರಾಹಕ ಸೇವೆಗಳನ್ನು ವಿಮಾ ಕಂಪೆನಿಗಳು ಹೊಂದಿವೆಯೇ? ಆಡ್ ಆನ್ ಗಳ ಕೊರತೆಯಿದೆಯೇ? ಅಥವಾ ಆನ್ ಲೈನ್ ಕಾರು ಇನ್ಶೂರೆನ್ಸ್ ಗೆ ಪ್ರಯತ್ನಿಸುವಾಗ ವೆಬ್ ಸೈಟ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಹೀಗೆ ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಸೂಕ್ತ ಕಾರಣಗಳಿರಬೇಕು.
2. ಕ್ಲೈಮ್ ಸೆಟಲ್ಮೆಂಟ್: ವಿಮೆಯ ಅತ್ಯಂತ ಪ್ರಮುಖ ಅಂಶ ಕ್ಲೈಮ್ ಸೆಟಲ್ಮೆಂಟ್ ಆಗಿರುತ್ತದೆ. ವಿಮಾ ಕಂಪೆನಿಗಳು ನಿಮ್ಮ ಕ್ಲೈಮ್ ಗಳನ್ನು ಸ್ವೀಕರಿಸದಿದ್ದರೆ ನೀವು ಪಾವತಿಸುವ ಪ್ರೀಮಿಯಂಗಳಿಗೆ ಅರ್ಥವಿರುವುದಿಲ್ಲ. ಆದುದರಿಂದ ನೀವು ಬೇರೆ ವಿಮಾ ಕಂಪೆನಿಗಳನ್ನು ಹುಡುಕುವಾಗ ಅವರ ಕ್ಲೈಮ್ ಸೆಟಲ್ಮೆಂಟ್ ಪ್ರಮಾಣವನ್ನು ನೋಡಿಕೊಳ್ಳಿ. ಕ್ಲೈಮ್ ಸೆಟಲ್ಮೆಂಟ್ ಪ್ರಮಾಣ ಹೆಚ್ಚಾದಂತೆ ಅವು ಒಪ್ಪಂದ ಮಾಡಿಕೊಂಡ ಕ್ಲೈಮ್ ಗಳು ಹೆಚ್ಚಾಗಿರುತ್ತವೆ. ನಿರೀಕ್ಷಿತ ಗ್ರಾಹಕರಿಗೆ ಇದು ಒಳ್ಳೆಯ ಸೂಚಕವಾಗಿರುತ್ತದೆ.
3. ಪ್ರೀಮಿಯಂ ಮುಖ್ಯ: ಪ್ರತಿ ಹಣಕಾಸು ವರ್ಷದ ಕೊನೆಗೆ ನಿಮ್ಮ ಕಾರನ್ನು ಮರು ವಿಮೆ ಮಾಡಿಕೊಳ್ಳಲು ನೀವು ಪ್ರೀಮಿಯಂ ಪಾವತಿಸುತ್ತೀರಿ. ಕೆಲವು ಸಂದರ್ಭದಲ್ಲಿ ಉದ್ಯೋಗ ಕಳೆದುಕೊಳ್ಳುವ ಅಥವಾ ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭ ಬರಬಹುದು. ಅಂತಹ ಸಂದರ್ಭಗಳಲ್ಲಿ ನಿಮಗೆ ಪ್ರೀಮಿಯಂ ಪಾವತಿಸಲು ಕಷ್ಟವಾಗಬಹುದು. ಈ ಬಗ್ಗೆ ಮೊದಲೇ ವಿಮಾ ಕಂಪೆನಿಗಳಲ್ಲಿ ಮಾತುಕತೆ ನಡೆಸಬೇಕು ಮತ್ತು ಇದಕ್ಕೆ ಯಾವುದೇ ಪರಿಹಾರವಿಲ್ಲವೆಂದಾಗ ಬೇರೆ ವಿಮಾ ಕಂಪೆನಿಗಳಿಗೆ ನಿಮ್ಮ ನಿರೀಕ್ಷೆಗೆ ತಕ್ಕಂತಹ ಸೇವೆ ಒದಗಿಸುವ ಕಂಪೆನಿಗಳನ್ನು ಹುಡುಕಬೇಕು.
4. ಅತ್ಯಂತ ಬುದ್ಧಿವಂತಿಕೆಯಿಂದ ಆಡ್ ಆನ್ ಗಳನ್ನು ಹುಡುಕಿ: ಕಾರುಗಳಿಗೆ ಹೊಸ ಇನ್ಶೂರೆನ್ಸ್ ಯೋಜನೆಗಳನ್ನು ಹುಡುಕುವಾಗ ವಿಮೆ ಒದಗಿಸುವವರು ನೀಡುವ ಆಡ್ ಆನ್ಸ್ ಗಳ ಬಗ್ಗೆ ಗಮನ ನೀಡಿ. ಪ್ರೀಮಿಯಂ ಮೊತ್ತ ನಿಷ್ಪ್ರಯೋಜಕವಾಗದಂತೆ ಹೆಚ್ಚು ಹಣ ದುಂದುವೆಚ್ಚವಾಗದಂತೆ ಅತ್ಯಂತ ವಿವೇಚನೆಯಿಂದ ವಿಮಾ ಕಂಪೆನಿಗಳನ್ನು ಆಯ್ಕೆಮಾಡಿಕೊಳ್ಳಿ. 
5. ಈಗಿರುವ ವಿಮಾ ಕಂಪೆನಿಗಳನ್ನು ಹೆಚ್ಚಿನ ಸೇವೆ ನೀಡುವಂತೆ ಮಾಡಿ: ನೀವು ವಿಮಾ ಕಂಪೆನಿಗಳನ್ನು ಬದಲಾಯಿಸುವ ಮೊದಲು ಈಗಿರುವ ವಿಮಾ ಕಂಪೆನಿಗಳಿಗೆ ಹೊಸ ಕಂಪೆನಿ ಇಂತಹ ವಿಶಿಷ್ಟ ಸೇವೆಗಳನ್ನು ನಮಗೆ ಕೊಡುತ್ತದೆ, ನೀವು ಕೂಡ ಕೊಡುವಿರಾದರೆ ಇರುತ್ತೇವೆ, ಇಲ್ಲದಿದ್ದರೆ ಬದಲಾಯಿಸುತ್ತೇವೆ ಎಂದು ಹೇಳಿದರೆ ಆಗ ಕಂಪೆನಿ ಉತ್ತಮ ಸೇವೆ ನೀಡಲು ಮುಂದಾಗಬಹುದು.
SCROLL FOR NEXT