ಪ್ರವಾಸ-ವಾಹನ

800 ಸಿಯಾಜ್ ಕಾರುಗಳನ್ನು ಹಿಂಪಡೆದ ಮಾರುತಿ!

Srinivas Rao BV
ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಇಂಡಿಯಾ (ಎಂಎಸ್ಐ) ಇತ್ತೀಚೆಗಷ್ಟೇ ತಯಾರಾದ ಸಿಯಾಜ್ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಹಿಂಪಡೆದಿದೆ. 
ಸ್ಪೀಡೋಮೀಟರ್ ನಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರುತಿ ಸುಜೂಕಿ ಇಂಡಿಯಾ ಸಿಯಾಜ್ ಕಾರುಗಳನ್ನು ಹಿಂಪಡೆದಿದೆ. ಆ.1 ರಿಂದ ಸೆ.21 ವರೆಗೆ ತಯಾರಾಗಿದ್ದ ಮಾರುತಿ ಸುಜೂಕಿಯ ಸಿಯಾಜ್ ಡಿಸೇಲ್ ಝೀಟಾ ಮತ್ತು ಆಲ್ಫಾ ಆವೃತ್ತಿಗಳ ಸ್ಪೀಡೋಮೀಟರ್ ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂಪಡೆಯಲಾಗಿದೆ. 
ಹಿಂಪಡೆಯಲಾಗಿರುವ ಕಾರುಗಳಲ್ಲಿನ ದೋಷವನ್ನು ಉಚಿತವಾಗಿ ಸರಿಪಡಿಸುವುದಾಗಿ ಮಾರುತಿ ಸಂಸ್ಥೆ ಹೇಳಿದ್ದು,  ಬಳಕೆದಾರರು ಈ ವೆಬ್ ಸೈಟ್  ನ್ನು ಕ್ಲಿಕ್ ಮಾಡಿ ತಮ್ಮ ಕಾರುಗಳಿಗೆ ತಪಾಸಣೆ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. 
ಸುಮಾರು 800 ಯುನಿಟ್ ಗಳಷ್ಟು ಕಾರುಗಳಿಗೆ ಸರ್ವಿಸ್ ಕ್ಯಾಂಪೇನ್ ನ್ನು ಪ್ರಾರಂಭಿಸಿದೆ.
SCROLL FOR NEXT