ಪ್ರವಾಸ-ವಾಹನ

ಮಾರುತಿ ಸುಜುಕಿ ವಾಹನಗಳ ಬೆಲೆ ರೂ. 10 ಸಾವಿರ ವರಗೆ ಹೆಚ್ಚಳ!

Nagaraja AB

ನವದೆಹಲಿ: ಮಾರುತಿ ಸುಜುಕಿ ವಾಹನಗಳ ಬೆಲೆ ರೂ. 10  ಸಾವಿರ ವರೆಗೆ ಹೆಚ್ಚಳವಾಗಿದೆ. ವಿದೇಶಿ ವಿನಿಮಯ ದರ ಹಾಗೂ ಸರಕುಗಳ ಬೆಲೆಯಲ್ಲಿ ಹೆಚ್ಚಳದ ಹಿನ್ನೆಲೆಯಲ್ಲಿ ಆಯ್ದ ಮಾದರಿಗಳ ವಾಹನಗಳ ಬೆಲೆಯಲ್ಲಿ  10 ಸಾವಿರ ರೂ.ವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.

ಪ್ರಮುಖ ಮಾದರಿಗಳ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಎಕ್ಸ್ ಶೋ ರೂಂ ಬೆಲೆಯಲ್ಲಿ 10 ಸಾವಿರ ರೂವರೆಗೂ ಹೆಚ್ಚಳವಾಗಿದೆ ಎಂದು ಎಂಎಸ್ ಐ ಹೇಳಿಕೆ ನೀಡಿದೆ.

ಇತ್ತೀಚಿಗೆ ಪರಿಚಯಿಸಲಾದ ಎರ್ಟಿಗಾ ಹೊಸ ಆವೃತ್ತಿ ಹೊರತುಪಡಿಸಿದರೆ  ಉಳಿದ ಬಹುತೇಕ ಕಂಪನಿಗಳ ವಾಹನಗಳ ಬೆಲೆಯಲ್ಲಿ ಹೆಚ್ಚಳಗೊಂಡಿರುವುದನ್ನು ಕಾಣಬಹುದಾಗಿದೆ.

 ದರ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಮಾರುತಿ ಆಲ್ಟೋ 800 ಹಾಗೂ  ಎಸ್- ಕ್ರಾಸ್  (ಎಕ್ಸ್ ಶೋ ರೂಂ )ಬೆಲೆ  ಕ್ರಮವಾಗಿ 2.53 ಲಕ್ಷ ಹಾಗೂ 11.45 ಲಕ್ಷ ಇತ್ತು. ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವುದಾಗಿ ಡಿಸೆಂಬರ್ ತಿಂಗಳಿನಲ್ಲಿಯೇ ಕಂಪನಿ ತಿಳಿಸಿತ್ತು. ಆದರೆ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಪಪಡಿಸಿರಲಿಲ್ಲ.

ಮಾರುತಿ ಸುಜುಕಿ ಇಂಡಿಯಾ ಹೊರತುಪಡಿಸಿದರೆ  ಟೊಯೊಟೊ ಕಿರ್ಲೋಸ್ಕರ್ ಮೋಟಾರ್, ಇಸುಜು ಮೊಟಾರ್ಸ್ ಇಂಡಿಯಾ ಕಂಪನಿಗಳು ಕೂಡಾ ಈ ವರ್ಷದ ಜನವರಿ ತಿಂಗಳಿನಿಂದ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದವು.
ಕಾರುಗಳ ಬೆಲೆ ಹೆಚ್ಚಳದಿಂದಾಗಿ ದೇಶಿಯ ಷೇರು ಮಾರುಕಟ್ಟೆಯಲ್ಲಿ  ಮಾರುತಿ ಷೇರು 7.457.95 ರಷ್ಟು ಕುಸಿದಿದ್ದು, ಶೇ.0.11 ರಷ್ಟಿದೆ.
SCROLL FOR NEXT