ಪ್ರವಾಸ-ವಾಹನ

ಮಡಿಕೇರಿ: ಹೋಮ್ ಸ್ಟೇ ಬುಕಿಂಗ್ ಮೇಲಿನ ನಿಷೇಧ ವಾಪಸ್

Lingaraj Badiger
ಮಡಿಕೇರಿ: ಮುಂಗಾರು ಆರಂಭ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಹೋಮ್ ಸ್ಟೇ ಬುಕಿಂಗ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೊಡಗು ಜಿಲ್ಲಾಡಳಿತ ವಾಪಸ್ ಪಡೆದಿದೆ.
ಜಿಲ್ಲಾಡಳಿತ ಹೇರಿದ ನಿಷೇಧ ಮಕಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದರೂ ಕೂಡ ಸುರಕ್ಷತೆ ಕುರಿತು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹೋಮ್ ಸ್ಟೇಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಪಸ್ ಪಡೆದಿದ್ದಾರೆ.
ಹೋಮ್ ಸ್ಟೇಗಳ ಮೇಲೆ ಹೇರಿದ್ದ ನಿಷೇಧವನ್ನು ಪ್ರವಾಸೋದ್ಯಮದ ಪಾಲುದಾರರು ವಿಶೇಷವಾಗಿ ಸೌಹಾರ್ಧತೆ ವಿಭಾಗವು ಜಿಲ್ಲಾಡಳತದ ನಿರ್ಣಯದಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.
ಈ ಕುರಿತು ಕೊಡಗು ಹೋಮಸ್ಟೇ ಸಂಘದ ಅಧ್ಯಕ್ಷ ವಿಕಾಸ ಅಚ್ಚಯ್ಯ ಅವರಿಗೆ ಪತ್ರ ಬರೆದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬುಕಿಂಗ್ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತನ್ನ ಸದಸ್ಯರಿಗೆ ತಿಳಿಸುವಂತೆ ಗ್ರಾಮ ಪಂಚಾಯತ್, ಕೊಡಗು ಹೋಮ್ ಸ್ಟೇ ಸಂಘಕ್ಕೆ ಸೂಚಿಸಿದೆ.
ಇದಕ್ಕೂ ಮುನ್ನ ಆಗಸ್ಟ್ 31ರವರೆಗೆ ಹೋಮ್ ಸ್ಟೇ ಬುಕಿಂಗ್ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.
SCROLL FOR NEXT